ದುಬಾರಿ ಬೈಕ್ ಕದ್ದು, ಶೋಕಿ ಜೀವನ ಮಾಡುತ್ತಿದ್ದ ಕಳ್ಳರು : ಇದೀಗ ಪೊಲೀಸರ ಅತಿಥಿ

ಬೆಂಗಳೂರು,ಡಿಸೆಂಬರ್,25,2020(www.justkannada.in):  ಬೈಕ್ ಕದಿಯೋದೇ ಈತನ ವೃತ್ತಿ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಅನ್ನು ಕ್ಷಣಮಾತ್ರದಲ್ಲಿ ಮಾಯ ಮಾಡುವ ಈತನಿಗೆ ಕರಗತವಾಗಿತ್ತು. ಈಗ ಈತ ಪೊಲೀಸರ ಅತಿಥಿಯಾಗಿದ್ದು, ಆತನಿಂದ ಬರೊಬ್ಬರಿ 18 ಲಕ್ಷ ಮೌಲ್ಯದ ಬೈಕ್ ವಶಕ್ಕೆ ಪಡೆದಿದ್ದಾರೆ.Teachers,solve,problems,Government,bound,Minister,R.Ashokಆರೋಪಿ ಹೆಸರು ರಂಗ ಅಲಿಯಾಸ್ ಬ್ರೂಸ್ಲಿ. ತನ್ನ ಗೆಳೆಯನ ಜೊತೆಗೆ ಸೇರಿ ಆತ ಟಾರ್ಗೆಟ್ ಮಾಡುತ್ತಿದ್ದು, ಬರೇ ದುಬಾರಿ ಬೈಕ್ ಗಳು. ಬುಲೆಟ್ ಎಲ್ಲಿ ಕಾಣುತ್ತವೋ ಅಲ್ಲಿ ಅವನ್ನು ಎಗರಿಸದೆ ಬಿಡುತ್ತಿರಲಿಲ್ಲ. ಎಲ್ಲಿಯೋ ಕದ್ದು ಎಲ್ಲಿಯೋ ಮಾರಿ ಲಕ್ಷ, ಲಕ್ಷ ಹಣ ಸಂಪಾದಿಸಿ ಶೋಕಿ ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಡಿಸೆಂಬರ್ 20 ರಂದು ಅರಸೀಕರೆ ಎರಡು ಬೈಕ್ ಕದ್ದು ರೈಲ್ವೆ ನಿಲ್ದಾಣದ ಬಳಿ ಬೈಕ್ ನಂಬರ್ ಪ್ಲೇಟ್ ಕಿತ್ತು, ಚಾಸಿ ನಂಬರ್ ನಾಶಮಾಡೋ ವೇಳೆ ಪೊಲೀಸರಿಗೆ ಬ್ರೂಸ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ. ಮತ್ತೋರ್ವ ಚೋರ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ಮಂಜ ತಲೆಮರೆಸಿಕೊಂಡಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬರೊಬ್ಬರಿ 18 ಲಕ್ಷ ರೂ.ಮೌಲ್ಯದ 15 ದುಬಾರಿ ಬೆಲೆಯ ಬೈಕ್ ಗಳನ್ನ ವಶಕ್ಕೆ ಪಡೆದಿದ್ದಾರೆ.

 Steal,expensive,bike,thieves,who,were,living,Shockie,now,cop’s,guest

ಅರಸೀಕರೆ ಪಟ್ಟಣದಲ್ಲಿ ಕಳ್ಳತನವಾದ ಬೈಕ್ ಪ್ರಕರಣ ಬೆನ್ನುಹತ್ತಿ ಹೊರಟ ಪೊಲೀಸರಿಗೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಬೈಕ್ ಕಳ್ಳತನ ಕೇಸ್ ಬಯಲಾಗಿದೆ. ಬಂಧಿತರಿಂದ 6 ರಾಯಲ್ ಎನ್ ಫೀಲ್ಡ್ 2 ಬಜಾಜ್ ಡ್ಯೂಕ್ ಕೆಟಿಎಂ ಬೈಕ್, 4 ಬಜಾಜ್ ಪಲ್ಸರ್, 1 ಅಪಾಚೆ ಬೈಕ್, 2 ಹೋಂಡಾ ಡಿಯೋ ಬೈಕ್ ಹೀಗೆ ಎಲ್ಲವೂ ದುಬಾರಿ ಬೆಲೆಯ ಬೈಕ್ ಗಳಲ್ಲೇ ಟಾರ್ಗೆಟ್ ಮಾಡಿ ಕದ್ದು ಲಕ್ಷ ಲಕ್ಷಕ್ಕೆ ಮಾರಾಟ ಮಾಡಿ ಶೋಕಿ ಜೀವನ ನಡೆಸುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

key words : Steal-expensive-bike-thieves-who-were-living- Shockie-now-cop’s-guest