ಮತಾಂತರ ನಿಷೇಧ ಕಾಯ್ದೆ ಬಲವಾಗಿ ಪ್ರತಿಪಾದನೆ: ರಾಜ್ಯದ ಯತಿಗಳು ಮತಾಂತರದ ವಿರುದ್ದ ಹೋರಾಟ ಮಾಡಬೇಕು- ಸಂಸದ ಪ್ರತಾಪ್ ಸಿಂಹ.

ಮೈಸೂರು,ಸೆಪ್ಟಂಬರ್,24,2021(www.justkannada.in): ಮತಾಂತರ ಅನ್ನೋದು ದೇಶದಾದ್ಯಂತ ನಡೆಯುತ್ತಿದೆ. ರಾಜ್ಯದ ಯತಿಗಳು ಮತಾಂತರದ ವಿರುದ್ದ ಹೋರಾಟ ಮಾಡಬೇಕು ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮತಾಂತರ  ದೇಶದಾದ್ಯಂತ ನಡೆಯುತ್ತಿದ್ದು, ಇದನ್ನು ತಡೆಯುವ ಕೆಲಸ ಮಾಡಬೇಕೆಂದು ಗೂಳಿಹಟ್ಟಿ ಶೇಖರ್ ಮನವಿ ಮಾಡಿದ್ದಾರೆ ಎಂದರು. ಇನ್ನು ಮತಾಂತರ ಆರೋಪವನ್ನ ವಿವಿಧ ಬಿಷಪ್‌ ಗಳಿಂದ ವಿರೋಧ ವಿಚಾರ ಕುರಿತು ಮಾತನಾಡಿದ ಪ್ರತಾಪ್ ಸಿಂಹ, ನೀವು ಮತಾಂತರದಲ್ಲಿ ಭಾಗಿಯಾಗಿಲ್ಲವಾದರೆ ಆತಂಕ ಏಕೆ.? ಬಾಲ ಸುಟ್ಟ ಬೆಕ್ಕಿನ ರೀತಿ ಏಕೆ ಚಡಪಡಿಸುತ್ತಿದ್ದೀರಾ.? ಮತಾಂತರ ಮಾಡುತ್ತಿದ್ದವರಿಗೆ ಅನಾನುಕೂಲ ಆಗುವುದು ಎಂದು ಟಾಂಗ್ ನೀಡಿದರು.

ಗೂಳಿಹಟ್ಟಿ ಶೇಖರ್  ಅವರ ತಾಯಿಗೆ ಆಗಿರುವ ಘಟನೆಯಿಂದ ಮನವಿ ಮಾಡಿದ್ದಾರೆ. ಇದು ನಮ್ಮ ಅನುಭವಕ್ಕೆ ಬಂದಿದೆ. ನಾನು ಸಹ ಮತಾಂತರ ನಿಷೇಧ ಕಾಯ್ದೆಯನ್ನು ಬಲವಾಗಿ ಪ್ರತಿಪಾದಿಸುತ್ತೇನೆ. ಕ್ರೈಸ್ತ ಧರ್ಮದ ಎಲ್ಲರಿಗೂ ಮನವಿ ಮಾಡಲಾಗಿದೆ. ಶಾಲೆ ಕಾಲೇಜುಗಳಲ್ಲಿ ಮತಾಂತರ ಮಾಡಲು ಸಾಧ್ಯವಿಲ್ಲ. ಪೋಷಕರು ವಿದ್ಯಾವಂತರು ಬುದ್ದಿವಂತರಿರುತ್ತಾರೆ. ನಾಗರೀಕತೆಯನ್ನು ಅಳವಡಿಸಿಕೊಂಡವರಿಗೆ ಮರಳು ಮಾಡಲು ಸಾಧ್ಯವಿಲ್ಲ. ನೀವು ಏಕೆ ಕೇರಿ ಕಾಲೋನಿಗಳನ್ನು ಆಯ್ಕೆ ಮಾಡುತ್ತಾರೆ.? ಅಲ್ಲಿ ಹೆಲ್ತ್ ಸೆಂಟರ್ ಮಾಡಿ ಚಿಕಿತ್ಸೆಗೆ ಹೋದರೆ ಮೊದಲು ಔಷಧಿ ಕೊಡುವುದಿಲ್ಲ. ಪ್ರಾರ್ಥನೆ ಮಾಡಿಸಿ ಔಷಧಿ ಕೊಡುತ್ತಾರೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.

ಮದರ್ ತೆರೇಸಾ ಅವರನ್ನು ಸಂತ ಪದವಿಗೆ ಹೋಗುವ ಮೊದಲು ಮ್ಯಾಜಿಕ್ ಮಾಡಲು ಹೇಳಲಾಗಿತ್ತು. ನಮ್ಮಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ನಾವು ಬೆಲೆ ಕೊಡುತ್ತೇವೆ. ಆದರೆ ಮದರ್ ತೆರೇಸಾ ಅವರಿಂದ ಮ್ಯಾಜಿಕ್ ಮಾಡಿ ಸಂತರನ್ನಾಗಿ ಮಾಡಲಾಯ್ತು. ಇದು ಮಂದಿನಾ ಮಂಗ್ಯಾ ಮಾಡುವ ತಂತ್ರ ಇದು. ಈಗಲೂ ಅದನ್ನೇ ಮತಾಂತರಕ್ಕೆ ಬಳಸಲಾಗುತ್ತಿದೆ. ನಮ್ಮ ಧರ್ಮ ಶ್ರೇಷ್ಟತೆಯನ್ನು ನಂಬಿದವರು ನಾವು ಆಕ್ರಮಣ ಪ್ರಹಾರ ಮಾಡುವುದಿಲ್ಲ. ಆದರೆ ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮಗೆ ಇದೆ. ರಾಜ್ಯದ ಯತಿಗಳು ಮತಾಂತರದ ವಿರುದ್ದ ಹೋರಾಟವನ್ನು ಮಾಡಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.

ಕಾಳ ಸಂತೆಯಲ್ಲಿ ಕಳ್ಳತನದ ಮಾಲು ಸೆಲ್ ಆಗುತ್ತೆ. ನೀವ್ಯಾಕೆ ಕೇರಿಗಳಿಗೆ ಹೋಗಿ ಗಿಫ್ಟ್ ಕೊಡ್ತಿರಾ.! ಜನರನ್ನ ಯಾಕೆ ಮರಳು ಮಾಡುವ ಕೆಲಸ ಮಾಡ್ತೀರಾ. ನೀವೂ ಚಿಕಿತ್ಸೆ ಕೊಡಿ, ಅದು ಬಿಟ್ಟು ಮ್ಯಾಜಿಕ್ ಮಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹ  ಹರಿಹಾಯ್ದರು.

101 ಗಣಪತಿಗೆ ನಮ್ಮ ಕೋರಿಕೆ ನೆರವೇರಿಸಿದಕ್ಕೆ ಧನ್ಯವಾದ ಅರ್ಪಿಸಿದ್ದೇವೆ.     

101 ಗಣಪತಿಗೆ ನಮ್ಮ ಕೋರಿಕೆ ನೆರವೇರಿಸಿದಕ್ಕೆ ಧನ್ಯವಾದ ಅರ್ಪಿಸಿದ್ದೇವೆ. ಸೆ.9ಕ್ಕೆ ಕೆಡಿಪಿ ಸಭೆಯಲ್ಲಿ ಹುಚ್ಚಗಣಿ ದೇಗುಲ ತೆರವು ಮಾಡಿದ್ದ ಬಗ್ಗೆ ಮಾತನಾಡಿದ್ದೆ. ನಾವು ಈ‌ ಬಳಿ ಗಣೇಶನ ಬಳಿ ಬಂದು ಬೇಡಿಕೊಂಡಿದ್ದೇವು. ಇಂದು ನಮ್ಮ ಈ ಬೇಡಿಕೆ‌ ಈಡೇರಿದೆ. ನಮಗೆ ಬಹಳ ಉತ್ತಮವಾದ ಮುಖ್ಯಮಂತ್ರಿಗಳು ಸಿಕ್ಕಿದ್ದಾರೆ. ವಿದೇಯಕ ಮಂಡಿಸಿ ಅದನ್ನ ಪಾಸ್ ಮಾಡಿದ್ದಾರೆ. ಇದರಿಂದ ನಮ್ಮ ದೇಗುಲಗಳ ಉಳಿವಿಗೆ ಹೊಸ ಕಾಯ್ದೆ ಸಿಕ್ಕಿದೆ. ಇದು ನಮಗೆ ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು. ಹುಚ್ಚಗಣಿ ದೇಗುಲದ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಬೇಕಿದೆ. ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಬರುತ್ತಾರೆ. ಜನರು ಹಾಗೂ ಸರ್ಕಾರ ದೇಣಿಗೆ ನೀಡಿದ್ರೆ ದೇಗುಲ ಕಟ್ಟಲು ಅನುಕೂಲ ಆಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಚಾಣಾಕ್ಯ ವಿವಿ ಸ್ಥಾಪನೆಗೆ ಕಾಂಗ್ರೆಸ್‌ ವಿರೋಧ ಹಿನ್ನೆಲೆ ಈ ಬಗ್ಗೆ ಮಾತನಾಡಿದ ಸಂಸದಪ ಪ್ರತಾಪ್ ಸಿಂಹ, ಕಾಂಗ್ರೆಸ್ ಬ್ರಿಟೀಷರು ಸ್ಥಾಪನೆ‌ ಮಾಡಿದ ಪಕ್ಷ. ಅವರು ಇನ್ನೂ ಬ್ರಿಟೀಷರ ಮನಸ್ಥಿತಿಯಲ್ಲೇ‌ ಇದ್ದಾರೆ. ಚಾಣಾಕ್ಯನ ಬಗ್ಗೆ ಅವರಿಗೆ ಏನು ಗೊತ್ತಿದೆ ಎಂದು ಟಾಂಗ್ ನೀಡಿದರು.

Key words: State -fight -against –conversion-MP -Pratap simha -demands.