ಸಕಲ ಸಿದ್ಧತೆಯೊಂದಿಗೆ ಮೈಸೂರು ಮಹಾರಾಣಿ ಕಾಲೇಜು ಆರಂಭ: ಕಾಲೇಜಿಗೆ ಬರಲು ವಿದ್ಯಾರ್ಥಿನೀಯರ ನಿರಾಸಕ್ತಿ…

ಮೈಸೂರು,ನವೆಂಬರ್,17,2020(www.justkannada.in):  ಕೊರೋನಾ ಮಹಾಮಾರಿ ನಡುವೆ ರಾಜ್ಯಾದ್ಯಂತ ಇಂದಿನಿಂದ ಕಾಲೇಜುಗಳ ಪುನಾರಂಭವಾಗಿದ್ದು ವಿದ್ಯಾರ್ಥಿಗಳು ಕಾಲೇಜಿನತ್ತ ಹೆಜ್ಜೆ ಇಡುತ್ತಿದ್ದಾರೆ.

ಮೈಸೂರಿನ ಮಹಾರಾಣಿ ಕಾಲೇಜು ಸಹ ತೆರೆದಿದ್ದು ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿನೀಯರಿಗೆ, ಉಪನ್ಯಾಸಕರಿಗೆ ಹಾಗೂ ಕಾಲೇಜಿನ ಸಿಬ್ಬಂದಿಗೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.

ಇಂದು ಕಾಲೇಜು ಆರಂಭವಾದರೂ ಕಾಲೇಜಿಗೆ ಬರಲು ವಿದ್ಯಾರ್ಥಿನಿಯರ  ನಿರಾಸಕ್ತಿ…

ಇಂದು ಕಾಲೇಜು ಆರಂಭವಾದರೂ ಕಾಲೇಜಿಗೆ ಬರಲು ವಿದ್ಯಾರ್ಥಿನೀಯರು ನಿರಾಸಕ್ತಿ ತೋರಿದ್ದಾರೆ. ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ 1000 ಕ್ಕೂ ಹೆಚ್ಚು ಅಂತಿಮ ವರ್ಷದ ವಿದ್ಯಾರ್ಥಿಗಳ ಪೈಕಿ ಕೇವಲ 10 ಜನ ಮಾತ್ರ ಕಾಲೇಜಿಗೆ ಹಾಜರಾಗಿದ್ದಾರೆ.

ಇನ್ನು ಕಾಲೇಜು ಆಡಳಿತ ಮಂಡಳಿ ಶೇ 50 ರಷ್ಟು ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿದ್ದರು. ಆದರೇ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು ಮೊದಲ ದಿನವಾದ್ದರಿಂದ ಹಾಜರಾತಿ ಸಂಖ್ಯೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ವಿನ ಸಂಖ್ಯೆಯಲ್ಲಿ ಹಾಜರಾಗುವ ವಿಶ್ವಾಸವಿದೆ ಎಂದು ಅಧ್ಯಾಪಕರು ತಿಳಿಸಿದ್ದಾರೆ.

ಮಹಾರಾಣಿ ಕಾಲೇಜಿಗೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಭೇಟಿ.

ಇಂದಿನಿಂದ ಕಾಲೇಜು ಆರಂಭವಾಗುತ್ತಿರುವ ಹಿನ್ನೆಲೆ, ಮೈಸೂರು ಮಹಾರಾಣಿ ಕಾಲೇಜಿಗೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಭೇಟಿ ನೀಡಿ ಕಾಲೇಜು ಆವರಣದಲ್ಲಿ ಪರಿಶೀಲನೆ ನಡೆಸಿದರು. ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ಪರಿಶೀಲಿಸಿದರು.start-maharani-college-mysore-student-coming-college

ಬಳಿಕ ಮಾತನಾಡಿದ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್,  ಎಂಟು ತಿಂಗಳ ಬಳಿಕ ಕಾಲೇಜುಗಳು ಆರಂಭವಾಗಿವೆ. ಸ್ವಚ್ಚತೆಗೆ ಮೊದಲ ಆದ್ಯತೆ ನೀಡುವಂತೆ ಸೂಚ‌ನೆ ನೀಡಲಾಗಿದೆ. ಪಾಲಿಕೆ ವತಿಯಿಂದ ಈಗಾಗಲೇ ಕಾಲೇಜುಗಳ ಸುತ್ತಮುತ್ತ ಸ್ವಚ್ಚತಾ ಕಾರ್ಯ ನಡೆಸಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಕೊರೋನ ಟೆಸ್ಟ್, ಮಾಸ್ಕ್ ಸ್ಯಾನಿಟೈಸ್ ಮಾಡುವಂತೆ ಕಾಲೇಜು ಆಡಳಿತ ಮಂಡಳಿಗೂ ಸೂಚನೆ ನೀಡಲಾಗಿದೆ. ಕಾಲೇಜು ಮತ್ತು ಹಾಸ್ಟೆಲ್ ಗಳಲ್ಲೂ ಕೊರೋನಾ ಟೆಸ್ಟ್ ಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಪೋಷಕರಿಂದ ಅನುಮತಿ ಪತ್ರ ತಾರದ ವಿದ್ಯಾರ್ಥಿನಿಯರಿಗೆ ನೋ ಎಂಟ್ರಿ…

ಕಾಲೇಜಿಗೆ ಬರಲು ಪೋಷಕರಿಂದ ಅನುಮತಿ ಪತ್ರ ತಾರದ ವಿದ್ಯಾರ್ಥಿನಿಯರನ್ನ  ಪ್ರಾಧ್ಯಾಪಕರು ವಾಪಸ್ ಕಳುಹಿಸಿದರು ಪೋಷಕರ ಸಹಿಯುಳ್ಳ ಪತ್ರ ತರುವಂತೆ ವಿದ್ಯಾರ್ಥಿನೀಯರಿಗೆ ಅಧ್ಯಾಪಕರು  ತಾಕೀತು ಮಾಡಿದ್ದಾರೆ. ಕೋವಿಡ್ ವರದಿ, ಒಪ್ಪಿಗೆ ಪತ್ರ ತೋರಿಸಿದರೆ ಮಾತ್ರ ಕಾಲೇಜು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

English summary…

Thin attendance of students at Mysuru Maharani College
Mysuru, Nov. 17, 2020 (www.justkannada.in): Following reopening of degree colleges across the state following government instructions, the illustrious Maharani College in Mysuru has also reopened. Covid-19 tests are being conducted for all the students, lecturers and non-teaching staff. Students were found undergoing tests by standing in a queue in the College premises today morning.
There are more than 1000 students pursuing final year degree in this college, whereas only 10 of them attended today. This shows the fear of Covid-19 pandemic still existing among the students. While the lecturers have expressed their view that the attendance would increase gradually in the coming days.start-maharani-college-mysore-student-coming-college
MCC Health Officer Dr. Nagaraj visited the Maharani College and inspected the ongoing Covid testing and ensured that all the students and others are wearing masks and carrying sanitizers.
Keywords: Maharani College- COVID-19-thin attendance

Key words: Start -Maharani College –Mysore-Student- coming – college.