ಸೆಂಟ್ ಫಿಲೋಮಿನಾ ಚರ್ಚ್ ನಲ್ಲಿ ಸರಳ ಕ್ರಿಸ್ ಮಸ್ ಆಚರಣೆಗೆ ಸಿದ್ಧತೆ…!

ಮೈಸೂರು,ಡಿಸೆಂಬರ್,18,2020(www.justkannada.in) : ಪ್ರಸಿದ್ಧ ಸೆಂಟ್ ಫಿಲೋಮಿನಾ ಚರ್ಚ್ ನಲ್ಲಿ ಈ ಬಾರಿ ಸರಳ ಕ್ರಿಸ್ ಮಸ್ ಆಚರಣೆಗೆ ಸಿದ್ಧತೆ ನಡೆಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಅದ್ದೂರಿ ಆಚರಣೆಗೆ ಬ್ರೇಕ್ ಹಾಕಲಾಗಿದೆ.Teachers,solve,problems,Government,bound,Minister,R.Ashokಸೆಂಟ್ ಫಿಲೋಮಿನಾ ಚರ್ಚ್ ನಲ್ಲಿ ಕ್ರಿಸ್ ಮಸ್ ಆಚರಣೆಗೆ ಅಂತಿಮ‌ ಹಂತದ ಸಿದ್ದತೆ ನಡೆದಿದ್ದು,  ಈ ಬಾರಿಯ ಕ್ರಿಸ್ ಮಸ್ ಕೇವಲ ಪ್ರಾರ್ಥನೆಗಷೇ ಸೀಮಿತ.  ಸಂಭ್ರಮದ ಆಚರಣೆಗೆ ಕೋವಿಡ್ ತಡೆಯೊಡ್ಡಿದ್ದು, ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ.

ಕ್ರಿಸ್ ಮಸ್ ದಿನದಂದು ನಡೆಯುವ  ಬಲಿ ಪೂಜೆ ಕೇವಲ ಸೀಮಿತ ಜನರಿಗಷ್ಟೆ ಅವಕಾಶ. ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಬ್ರೇಕ್. ಬಲಿಪೂಜೆ ಸಂದರ್ಭದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಭಂದ. ಬೆಳಗ್ಗೆ ಮತ್ತೆ ಸಂಜೆ ಅವಧಿಯಲ್ಲಿ ಮಾತ್ರ  ಅವಕಾಶ ಕಲ್ಲಿಸಲಾಗಿದೆ.

ಮನೆಯಲ್ಲೆ ಕ್ರಿಸ್ ಮಸ್ ಆಚರಣೆಗೆ ಮನವಿ

 

St.Philomena-Simple-church-Preparing-Christmas- Celebration ...!

ಮನೆಯಲ್ಲೆ ಕ್ರಿಸ್ ಮಸ್ ಆಚರಣೆಗೆ ಸೆಂಟ್ ಫಿಲೋಮಿನಾ ಚರ್ಚ್ ನ ಆಡಳಿತ ಮಂಡಳಿ ಮನವಿ. ಸರ್ಕಾರದ ಮಾರ್ಗ ಸೂಚಿ ಅನ್ವಯ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬರುವಂತ ಭಕ್ತಾಧಿಗಳಿಗೆ ಮಾಸ್ಕ್ , ಸ್ಯಾನಿಟೈಸರ್ , ಸಾಮಾಜಿಕ ಅಂತರ ಕಾಯ್ದುಕೊಳ್ಳವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ಸೆಂಟ್ ಪೀಲೋಮಿನ ಚರ್ಚ್ ನ ಫಾದರ್ ಸ್ಟಾನ್ಲಿ ತಿಳಿಸಿದ್ದಾರೆ.

key words : St.Philomena-Simple-church-Preparing-Christmas- Celebration …!