ಸೋಮವಾರದಿಂದ ಎಸ್ ಎಸ್ ಎಲ್ ಸಿ ಮೌಲ್ಯಮಾಪನ: ಮೈಸೂರಿನಲ್ಲಿ ಆರು ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ…

ಮೈಸೂರು,ಜು,11,2020(www.justkannada.in):  ಸೋಮವಾರದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನ ಶುರುವಾಗಲಿದ್ದು ಈ ಹಿನ್ನೆಲೆ ಮೈಸೂರಿನಲ್ಲಿ ಸಿದ್ದತೆ ನಡೆಸಲಾಗಿದೆ.SSLC –valuation-Monday-Prohibition- around-Mysore.

ಮೌಲ್ಯಮಾಪನ ಹಿನ್ನೆಲೆಯಲ್ಲಿ 6 ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೌಲ್ಯಮಾಪನ ನಡೆಯುವ ಸ್ಥಳಗಳಲ್ಲಿ 200 ಮೀಟರ್ ವ್ಯಾಪ್ತಿಯ ಸುತ್ತ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.SSLC –valuation-Monday-Prohibition- around-Mysore.

ನಗರದ ಜ್ಞಾನಗಂಗಾ ಪ್ರೌಢಶಾಲೆ (ಕುವೆಂಪುನಗರ), ಚಿನ್ಮಯ ಪ್ರೌಢಶಾಲೆ (ಜಯಲಕ್ಷ್ಮೀಪುರಂ), ಸದ್ವಿದ್ಯಾ ಪ್ರೌಢಶಾಲೆ (ನಾರಾಯಣ ಶಾಸ್ತ್ರಿ ರಸ್ತೆ), ವಿಜಯ ವಿಠಲ ಪ್ರೌಢಶಾಲೆ (ಸರಸ್ವತಿಪುರಂ), ನಿರ್ಮಲ ಪ್ರೌಢಶಾಲೆ (ವಿ.ವಿ.ಪುರಂ), ಸೆಂಟ್ ಫಿಲೋಮಿನಾ ಪ್ರೌಢಶಾಲೆ (ಎನ್.ಆರ್.ಮೊಹಲ್ಲಾ) ಕೇಂದ್ರಗಳಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನ ನಡೆಯಲಿದೆ. ಸೋಮವಾರದಿಂದ ಮೌಲ್ಯಮಾಪನ ಮುಗಿಯುವವರೆಗೂ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಆದೇಶ ಜಾರಿಯಾಗಿರಲಿದೆ.SSLC –valuation-Monday-Prohibition- around-Mysore.

Key words: SSLC –valuation-Monday-Prohibition- around-Mysore.