ಶೀಘ್ರವೇ ಎಸ್.ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು  ಪರೀಕ್ಷೆಗೆ ದಿನಾಂಕ ಪ್ರಕಟ- ಶಿಕ್ಷಣ ಸಚಿವ ಸುರೇಶ್ ಕುಮಾರ್…

ಬೆಂಗಳೂರು, ನವೆಂಬರ್,23,2020(www.justkannada.in):   ರಾಜ್ಯದಲ್ಲಿ ಡಿಸೆಂಬರ್ ವರೆಗೂ ಶಾಲೆ ಮತ್ತು ಪಿಯು ಕಾಲೇಜುಗಳನ್ನ ತೆರೆಯದಿರಲು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ.kannada-journalist-media-fourth-estate-under-loss

ಸಭೆ ಬಳಿಕ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೋವಿಡ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಡಿಸೆಂಬರ್ ಅಂತ್ಯದವರೆಗೂ ಯಾವುದೇ ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳು ಆರಂಭಿಸುವುದಿಲ್ಲ ಎಂದಿದ್ದಾರೆ.sslc-secondary-pu-examination-date-published-soon-education-minister-suresh-kumar

ಹಾಗೆಯೇ ಶೀಘ್ರವೇ ಎಸ್.ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು  ಪರೀಕ್ಷೆಗೆ ದಿನಾಂಕ ಪ್ರಕಟ ಮಾಡುತ್ತೇವೆ. ಬೋರ್ಡ್ ಎಕ್ಸಾಂ ಇರುವುದರಿಂದ ದಿನಾಂಕ ಪ್ರಕಟಿಸುತ್ತೇವೆ. ಈ ಬಾರಿ ಎಸ್ ಎಸ್ ಎಲ್,ಸಿಯಲ್ಲಿ 9,59,566 ವಿದ್ಯಾರ್ಥಿಗಳಿದ್ದಾರೆ. 5,70,126 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿದ್ದಾರೆ ಎಂದು  ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

Key words: SSLC – Secondary PU -Examination –date- published –soon-Education Minister -Suresh Kumar.