ಯಾವುದೇ ಕಾರಣಕ್ಕೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬಾರದು: ಹೆಚ್. ವಿಶ್ವನಾಥ್

ಮೈಸೂರು, ಜುಲೈ 04, 2021 (www.justkannada.in): ಎಸ್ ಎಸ್ ಎಲ್ ಸಿ‌ ಪರೀಕ್ಷೆ ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಗ್ರಹಿಸಿದ್ದಾರೆ.

ಅಕ್ಷರ ,ಆರೋಗ್ಯ ಚೆನ್ನಾಗಿದ್ದರೆ ಆಡಳಿತ ಚೆನ್ನಾಗಿರುತ್ತದೆ. ಮಗುವಿನ ಆರೋಗ್ಯ ಸುರಕ್ಷತೆ ಈಗ ಮುಖ್ಯ ನಂತರ ಶಿಕ್ಷಣ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ದೊಡ್ಡ ಅನಾಹುತವಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ವಿ ಎಚ್ಚರಿಸಿದರು.

ಪಿಯುಸಿ ಪರಿಕ್ಷೆ ಬೇಡ ಅಂತಾ ಹೇಳಲಾಗಿದೆ. ಶಿಕ್ಷಣ ಸಮಿತಿಯ ವರದಿ ಏನು‌ ಹೇಳಿದೆ ? ನೀವು ಆರೋಗ್ಯ ಇಲಾಖೆಯ ಸಲಹೆ ತೆಗೆದುಕೊಂಡಿದ್ದೀರಾ ? ಇದು ಯಾವುದನ್ನು ನೀವು ತೆಗೆದುಕೊಂಡಿಲ್ಲ. ಪರೀಕ್ಷೆ ನಡೆಸುವುದು ಹುಡುಗಾಟನಾ ದ್ವಿತೀಯ ಪಿಯುಸಿಗೆ ಪರೀಕ್ಷೆ ಇಲ್ಲ . ಆಗಿದ್ದರೆ ಅವರಿಗಿಂತ ಚಿಕ್ಕವರಾದ ಎಸ್ ಎಸ್ ಎಲ್ ಸಿ ಅವರಿಗೆ ಏಕೆ ? ಮೈಸೂರಿನಲ್ಲಿ ಎಚ್ ವಿಶ್ವನಾಥ್ ಪ್ರಶ್ನಿಸಿದರು.

ಬಹಳಷ್ಟು ದೊಡ್ಡ ದೊಡ್ಡ ರಾಜ್ಯಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಇಲ್ಲ. ಮಕ್ಕಳಿಗೆ ಇನ್ನೂ ಲಸಿಕೆ ಇಲ್ಲ. ಎಲ್ಲೇ ಓದರು ನೆಗಿಟೀವ್ ರಿಪೋರ್ಟ್ ಬೇಕು.‌ಮಕ್ಕಳಿಗೆ ಯಾವ ರಿಪೋರ್ಟ್ ಕೊಡ್ತಿರಾ.? ಡೆಲ್ಟ್ ಮಕ್ಕಳನ್ನೆ ಟಾರ್ಗೆಟ್ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ದೇವಿಶೆಟ್ಟಿ ಕೂಡ ಅದನ್ನೇ ಹೇಳಿದ್ದಾರೆ. ಮಕ್ಕಳ ಆರೋಗ್ಯ, ಸಂರಕ್ಷತೆ ದೃಷ್ಟಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಬೇಡ. ಶೇ40 ಮಾತ್ರ ಪಾಠ ಆಗಿದೆ ಅಂತ ಹೇಳಿದ್ದಾರೆ. ಎಷ್ಟು ಮಕ್ಕಳು ಪರೀಕ್ಷೆ ಸಿದ್ದರಿದ್ದಾರೆ. ಮಕ್ಕಳಿಗೆ ಏನೂ ಸೌಲಭ್ಯ ಇಲ್ಲ ಎಂದರು.

ಪರೀಕ್ಷೆಗೆ ಮಕ್ಕಳಿಗೆ ಸಿದ್ದತೆನೆ ಇಲ್ಲ. ಡೆಲ್ಟಾ ಎರಡು ಮೂರು ನಿಮಿಷದಲ್ಲಿ ಹರಡುತ್ತೆ ಎಂದು ಹೇಳುತ್ತಿದ್ದೀರಿ‌. ಅದು ಹರಡಿದೆ ಯಾರು ಜವಾಬ್ದಾರಿ. ನೀವು ಹೆಲ್ತ್ ಡಿಪಾರ್ಟ್ಮೆಂಟ್ ಪರ್ಮಿಷನ್ ತೆಗೆದುಕೊಂಡಿದ್ದೀರಾ. ಶಿಕ್ಷಣ ಇಲಾಖೆ ಎಲ್ಲಾ ಇಲಾಖೆಗಳಿಗಿಂತ ಆದರ್ಶವಾದ ಇಲಾಖೆ. ಫ್ಲೀಸ್ ಡ್ರಾಪ್ ದ ಎಸ್ ಎಸ್ ಎಲ್ ಸಿ ಎಕ್ಸಾಂ ಇಂದೇ ಆದೇಶ ಮಾಡಿ ಇಲದಿದ್ದರೆ ನಾಳೆ ಆಗುವ ಅನಾಹುತಕ್ಕೆ ನೀವೇ ಜವಾಬ್ದಾರರಾಗಬೇಕಾಗುತ್ತದೆ. ಎಂ ಎಲ್ ಸಿ ವಿಶ್ವನಾಥ್ ಹೇಳಿದರು.