ಜೂನ್ 25 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ: ಪ್ರೌಢಶಾಲೆಗಳಲ್ಲಿ ಪ್ರವೇಶ ಪತ್ರ ವಿತರಣೆ…

Promotion

ಮೈಸೂರು,ಜೂ,15,2020(www.justkannada.in): ಜೂನ್ 25 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಪ್ರಾರಂಭವಾಗಲಿದ್ದು ಈ ಹಿನ್ನೆಲೆ ಇಂದಿನಿಂದಲೇ ಪ್ರೌಢಶಾಲೆಗಳಲ್ಲಿ ಪ್ರವೇಶ ಪತ್ರ ವಿತರಣೆ ಮಾಡಲಾಗುತ್ತಿದೆ.

ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಪ್ರೌಢಶಾಲೆಗಳಲ್ಲಿ ಇಂದಿನಿಂದಲೇ ಪರೀಕ್ಷಾ ಪ್ರವೇಶ ಪತ್ರ ವಿತರಣೆ ಮಾಡಲಾಗುತ್ತಿದ್ದು  ವಿದ್ಯಾರ್ಥಿಗಳು, ಪೋಷಕರು, ಗೆಳೆಯರೊಟ್ಟಿಗೆ ಹೈಸ್ಕೂಲ್ ಆವರಣದಲ್ಲಿ ಜಮಾವಣೆಗೊಂಡು ಸಿಬ್ಬಂದಿಯಿಂದ ಹಾಲ್ ಟಿಕೆಟ್ ಪಡೆಯುತ್ತಿದ್ದಾರೆ.sslc-exam-june-25th-distribution-admission-ticket-high-schools-mysore

ಹಾಗೆಯೇ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಪ್ರವೇಶ ಪತ್ರ ಪಡೆದರು. ಸುಧೀರ್ಘ ಅವಧಿ ಬಳಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ನೆರೆದಿದ್ದುದ್ದು ಕಂಡು ಬಂತು.  ಈ ವೇಳೆ ಪರೀಕ್ಷಾ ವಿಚಾರ ಕುರಿತು ವಿದ್ಯಾರ್ಥಿಗಳು ಪರಸ್ಪರ ಸಮಾಲೋಚನೆ ನಡೆಸಿದರು. ಬಹುದಿನಗಳ ಬಳಿಕ ಭೇಟಿಯಾದ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿತ್ತು.

Key words: SSLC Exam – June 25th-Distribution – admission ticket-high schools-mysore