28ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುರು: ಹಿಜಾಬ್ ಧರಿಸಿ ಬಂದರೆ not allowed ಎಂದ ಶಿಕ್ಷಣ ಇಲಾಖೆ

kannada t-shirts

ಬೆಂಗಳೂರು, ಮಾರ್ಚ್ 26, 2022 (www.justkannada.in): ಮಾ.28 ರಿಂದ ಏ.11ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಎಲ್ಲ ವಿದ್ಯಾರ್ಥಿಗಳೂ ಸಮವಸ್ತ್ರ ಧರಿಸಿಯೇ ಎಕ್ಸಾಂಗೆ ಹಾಜರಾಗಬೇಕು.

ಹಿಜಾಬ್​ ಧರಿಸಿ ಬಂದವರಿಗೆ ಪರೀಕ್ಷೆಗೆ ಪ್ರವೇಶ ಇಲ್ಲ ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಹಿಜಾಬ್​ ವಿಚಾರದಲ್ಲಿ ಹೈಕೋರ್ಟ್​ ನೀಡಿರುವ ತೀರ್ಪು ಪಾಲಿಸಿಸುತ್ತಿದ್ದು, ಹಿಜಾಬ್​ ಧರಿಸಿ ಬದವರಿಗೆ ಪರೀಕ್ಷೆಗೆ ಪ್ರವೇಶ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಹೇಳಿದ್ದಾರೆ.

ಸಹಾಯವಾಣಿ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಮಾ.27ರವರೆಗೆ ಬೆಳಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ ಕಾರ್ಯನಿರ್ವಹಿಸುತ್ತದೆ. ಸಹಾಯವಾಣಿ ಸಂಖ್ಯೆ: 080-23310075, 76 ಅನ್ನು ಸಂಪರ್ಕಿಸಬಹುದು.

website developers in mysore