ಮೈಸೂರಿನ ಇಸ್ಕಾನ್ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ: ಕೃಷ್ಣ ಮತ್ತು ರಾಧೆಯಾಗಿ ಕಂಗೊಳಿಸಿದ ಶಾಲಾ ಮಕ್ಕಳು…

ಮೈಸೂರು.ಆ,23,2019(www.justkannada.in): ಶ್ರೀಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬವಾಗಿದ್ದು ಶ್ರೀ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಪ್ರತಿಯೊಂದು ಮನೆಯಲ್ಲಿ ಪೋಷಕರು ತಮ್ಮ ಚಿಕ್ಕ ಚಿಕ್ಕ ಮಕ್ಕಳಿಗೆ ಶ್ರೀಕೃಷ್ಣನ ವೇಷಭೂಷಣ ತೊಡಿಸುವುದು ವಿಶೇಷ.  ಹಾಗೆಯೇ ದೇವಸ್ತಾನಕ್ಕೆ ಹೋಗಿ ಪೂಜೆ ಸಲ್ಲಿಸಿವುದು ಸಂಪ್ರದಾಯವಾಗಿದೆ.

ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನ ಇಸ್ಕಾನ್ ದೇವಾಲಯದಲ್ಲಿ ಇಂದು ಭಕ್ತಿ ಭಾವ ಹಾಗೂ ಸಡಗರದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ.

ಇಸ್ಕಾನ್ ದೇವಾಲಯದಲ್ಲಿ  ಜನ್ಮಾಷ್ಟಮಿ ಕುರಿತ ಶ್ರೀ ಕೃಷ್ಣ ದೇವರಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ ಮುಂಜಾನೆಯಿಂದಲೇ ವಿವಿಧ ರೀತಿಯ ಅಭಿಷೇಕಗಳ ಮೂಲಕ ವಿಶೇಷ ಪೂಜೆ ಸಲ್ಲಿಸಲಾಗ್ತಿದೆ. ಎರಡು ದಿನಗಳ ಕಾಲ ಈ ಕಾರ್ಯ ನಡೆಯಲಿದ್ದು, ಸಾವಿರಾರು ಭಕ್ತದಿಗಳು ಸರಥಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳಿಗಾಗಿ ಪೂಜೆ ಸಲ್ಲಿಸಿದರು.. ಇನ್ನು ಇಲ್ಲಿ  ವಿವಿಧ ಶಾಲೆಗಳ ಶಾಲಾಮಕ್ಕಳು  ಕೃಷ್ಣ ಮತ್ತು ರಾಧೇಯ ವೇಷಭೂಷಣ ಧರಿಸಿ ಕಂಗೊಳಿಸಿದರು.

Key words: Sri Krishna Janmashtami- ISKCON Temple – Mysore