ಅಂಬಾವಿಲಾಸ ಅರಮನೆಯಂಗಳದಲ್ಲಿ ಫಿರಂಗಿಗಳಿಗೆ ವಿಶೇಷ ಪೂಜೆ

Promotion

ಮೈಸೂರು,ಅಕ್ಟೊಂಬರ್,04,2020(www.justkannada.in) : ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಸಂಪ್ರದಾಯಿಕ ದಸರಾ ಸಂಭ್ರಮ ಮನೆಮಾಡಿದ್ದು, ಅಂಬಾವಿಲಾಸ ಅರಮನೆಯಂಗಳದಲ್ಲಿ ಫಿರಂಗಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.jk-logo-justkannada-logoಭಾನುವಾರ ಅರಮನೆ ಆವರಣದಲ್ಲಿ ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ಜಂಬೂ ಸವಾರಿ ವೇಳೆ ಕುಶಾಲ ತೋಪು ಸಿಡಿಸಲು ಬಳಸುವ ಹತ್ತು ಫಿರಂಗಿಗಳಿಗೆ ಪೊಲೀಸರು ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.   Special-veneration-artillery-Ambawilasa-Palace10 ಫಿರಂಗಿ ಗಾಡಿಗಳಿಗೆ ಸಾಂಪ್ರದಾಯಿಕ ಪೂಜೆ ಹಾಗೂ ಜಂಬೂ ಸವಾರಿಯ ಫಿರಂಗಿ ತಾಲೀಮಿಗೆ ಚಾಲನೆ ನೀಡಲಾಯಿತು. ಗಜಪಡೆ, ಅಶ್ವಾರೋಹಿ ಪಡೆಗೆ ಫಿರಂಗಿ ಶಬ್ದ ಪರಿಚಯಿಸಲು ಎಂದಿನಂತೆ ಫಿರಂಗಿ ತಾಲೀಮು ನಡೆಸಲು ಸಿದ್ದತೆ ಮಾಡಲಾಯಿತು. ಜಂಬೂ ಸವಾರಿಯಂದು 21 ಕುಶಾಲತೋಪು ಸಿಡಿಸುವ ಕಾರ್ಯ ನಡೆಯಲಿದ್ದು, ಸಿಎಆರ್ ಪೊಲೀಸರು ಕುಶಾಲ ತೋಪು ಸಿಡಿಸಲು ಸಿದ್ಧತೆ ನಡೆಸಿದರು.

ಈ ಸಂದರ್ಭ ಡಿಸಿಪಿ ಪ್ರಕಾಶ್ ಗೌಡ, ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ಸೇರಿ ಇತರ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

key words : Special-veneration-artillery-Ambawilasa-Palace