ಲಾಕ್ಡೌನ್ ಸಂಕಷ್ಟದ ಕಥೆ ಹೇಳುವ ‘ಫೋಟೋ’! ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಮನ ಸೆಳೆದ ವಿಶೇಷ ಚಿತ್ರ

kannada t-shirts

ಕಥೆಯೊಂದು ಹೇಳ್ತೀನಿ ಅಂತ ನಿರ್ದೇಶಕ ಶುರು ಮಾಡಿ ಎಲ್ಲರ ಕಣ್ಣು ತೆರೆಸೋ ಚಿತ್ರ ಫೋಟೋ!

೧೪ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಚಿತ್ರ  ಕೋರೋನ ದಿನಗಳಲ್ಲಿ ನಡೆದ ವಿವಿಧ ಘಟನೆಗಳ ಸುತ್ತ ಹೆಣೆಯಲಾಗಿದೆ. ಉತ್ತರಕರ್ನಾಟಕದ ಒಬ್ಬ ದಿನಗೂಲಿ ಕಾರ್ಮಿಕ ಹಾಗೂ ಅವನ ಕುಟುಂಬದ ಸುತ್ತ ಇದೆ.

ಇದ್ದಕ್ಕಿದಂತೆ ಲಾಕ್ಡೌನ್ ಆದಾಗ ತನ್ನ ಮಗನ ಜೊತೆ ಊರಿಗೆ ಹೊರಡುವ ಕೂಲಿ ಕಾರ್ಮಿಕ ಗ್ಯಾನ ಹಾಗೂ ಅವನ ಮಗ ದುರ್ಗ್ಯಾ, ಪೊಲೀಸರ ದೌರ್ಜನ್ಯ, ಇಂತಹ ಸಮಯದಲ್ಲೂ ತಮ್ಮ ಕಾರ್ಯ ಸಾಧಿಸುವ ಕೆಲವು ಗುಂಪುಗಳು, ಸೂತಕದ ಮನೆಯ ದೀಪ ಒಂದಾದರೆ ಕೊರೋನಾ ಓಡಿಸಲು ಪಟಾಕಿ ಹಚ್ಚುವ ಹುಚ್ಚುಜನ ,  ತೋರಿಕೆಯ ಸಹಾಯ, ಬಡಜನರ ಬದುಕು ಎಲ್ಲವನ್ನು ಕಣ್ಣಿಗೆಕಟ್ಟುವಂತೆ ಹೃದಯಕ್ಕೆ ತಟ್ಟುವಂತೆ ಚಿತ್ರಿಸಿದ್ದಾರೆ.

ಇನ್ನು ಛಾಯಾಗ್ರಹಣ, ಶಬ್ದವಿನ್ಯಾಸ, ನಟನೆ, ನಿರ್ದೇಶನ ಎಲ್ಲ ನೋಡಿದಾಗ ಒಂದು ಅಭೂತಪೂರ್ವ ಅನುಭವ ನಿಮ್ಮದಾಗುತ್ತದೆ. ಇದು ಕೇವಲ ಚಲನಚಿತ್ರವಾಗಿರದೆ ನಮ್ಮ ಸಾಮಾಜಿಕ ಮೌಲ್ಯಗಳ ವಿಡಂಬನೆಯಾಗಿದೆ. ಎಲ್ಲರೂ ಖಂಡಿತ ನೋಡಲೇಬೇಕಾದ ಚಿತ್ರ.

ಚಿತ್ರತಂಡ:

ರಚನೆ ಮತ್ತು ನಿರ್ದೇಶಕ – ಉತ್ಸವ್‌ಗೋನವಾರ

ನಿರ್ಮಾಪಕರು – ಫಕೀರಪ್ಪಬಂಡಿವಾಡ

ನಟರು – ಮಹದೇವ ಹಡಪದ, ಜಹಾಂಗೀರ್‌, ಸಂಧ್ಯಾಅರಕೆರೆ, ಡಿಂಗ್ರಿನರೇಶ್‌, ಗಾಯತ್ರಿಹೆಗ್ಗೋಡು, ವೀರೇಶ್.

ಛಾಯಾಗ್ರಹಣ – ದಿನೇಶ್‌ದಿವಾಕರನ್‌

ಸಂಕಲನ – ಶಿವರಾಜ್‌ಮೇಹು.

ಶಬ್ಧವಿನ್ಯಾಸ – ರವಿಹಿರೆಮಠ್‌

ಸಿಂಕ್‌ಸೌಂಡ್‌ರೆಕಾರ್ಡಿಸ್ಟ್‌ – ಶಶಾಂಕ್‌ಕೆಎಸ್

website developers in mysore