ದಕ್ಷಿಣ ಆಫ್ರಿಕಾದ ಕೋವಿಡ್ ರೂಪಾಂತರದ ಮೊದಲ ಪ್ರಕರಣ  ಕರ್ನಾಟಕದಲ್ಲಿ ಪತ್ತೆ

ಬೆಂಗಳೂರು,ಮಾರ್ಚ್,11,2021(www.justkannada.in) : ದಕ್ಷಿಣ ಆಫ್ರಿಕಾದ ಕೋವಿಡ್ ರೂಪಾಂತರದ ಮೊದಲ ಪ್ರಕರಣ  ಕರ್ನಾಟಕದಲ್ಲಿ ದಾಖಲಾಗಿದೆ. ಆರೋಗ್ಯ ಇಲಾಖೆ ತನ್ನ ಒಂದು ಬುಲೆಟಿನ್ ನಲ್ಲಿ ಇದನ್ನು ಖಚಿತಪಡಿಸಿದೆ.jkಮಾರ್ಚ್ 10ರ ವೇಳೆಗೆ ಭಾರತದಲ್ಲಿ ಯುಕೆಯಿಂದ ಹಿಂದಿರುಗುವ 64 ಮಂದಿ ಕರೋನಾ ವೈರಸ್ ಪಾಸಿಟಿವ್ ಎಂದು ಪತ್ತೆ ಹಚ್ಚಲಾಗಿತ್ತು. ಅಷ್ಟೇ ಅಲ್ಲ, ಈ 64 ಜನರ 26 ಪ್ರಾಥಮಿಕ ಸಂಪರ್ಕಗಳು ಕರೋನಾ ಪಾಸಿಟಿವ್ ಎಂದು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಮಾರ್ಚ್ 10ರವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಡೆಸಿದ ಪರೀಕ್ಷೆಗಳ ಪ್ರಕಾರ, ವ್ಯಕ್ತಿಯೊಬ್ಬ ದಕ್ಷಿಣ ಆಫ್ರಿಕಾ ಮಾದರಿಯ ಕರೋನಾ ಸೋಂಕಿಗೆ ಒಳಗಿದ್ದಾನೆ ಎಂದು ತಿಳಿದು ಬಂದಿದೆ.

12 deaths-1,325 infections-coronavirus-state

ಈ ವೈರಸ್ ಅನ್ನು ದಕ್ಷಿಣ ಆಫ್ರಿಕಾ ಡಿಸೆಂಬರ್ ನಲ್ಲಿ ಪತ್ತೆಯಾಗಿತ್ತು. ಈ ಹಿಂದೆ, ಹೊಸ ಯುಕೆ ರೂಪಾಂತರದ ಬಗ್ಗೆ ಜನರ ಕಳವಳವೂ ಗಣನೀಯವಾಗಿ ಹೆಚ್ಚಿದೆ, ಕರ್ನಾಟಕದಲ್ಲಿ ಇಂದು 7,465 ಪ್ರಕರಣಗಳು ದಾಖಲಾಗಿವೆ ಮತ್ತು ಇದುವರೆಗೆ 12,379 ಜನರು ಕರೋನಾದಿಂದ ಸಾವನ್ನಪ್ಪಿದ್ದಾರೆ.

key words : South-Africa-Covid-transformation-First-Case-Karnataka-Detect