ಶೀಘ್ರದಲ್ಲೇ ಬಿ.ಕಾಂ., ಬಿ.ಎಸ್‌ಸಿ, ಬಿ.ಎ. ಪರೀಕ್ಷೆಗಳು ಕನ್ನಡದಲ್ಲಿ.

ಬೆಂಗಳೂರು, ಡಿಸೆಂಬರ್ 21, 2022 (www.justkannada.in): ಯೂನಿವರ್ಸಿಟಿ ಗ್ರಾö್ಯಂಟ್ಸ್ ಕಮೀಷನ್ (ಯುಜಿಸಿ) ಇತ್ತೀಚೆಗೆ ದೇಶದಾದ್ಯಂತ ವಿದ್ಯಾರ್ಥಿಗಳು ಶೀಘ್ರದಲ್ಲೇ ತಮ್ಮ ಮಾತೃ ಭಾಷೆಯಲ್ಲಿ ಪರೀಕ್ಷೆಗಳನ್ನು ಬರೆಯುವ ಅವಕಾಶ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಬಂಗಾಳಿ, ಗುಜರಾತಿ, ತಮಿಳು ಹಾಗೂ ತೆಲುಗು ಸೇರಿದಂತೆ ಒಟ್ಟು ೧೨ ಭಾಷೆಗಳಿಗೆ ವಿವಿಧ ಕೋರ್ಸ್ಗಳ ಪಠ್ಯಪುಸ್ತಕಗಳನ್ನು ಅನುವಾದಿಸುವ ಕಾರ್ಯ ಆರಂಭಿಸುವ ಸಿದ್ಧತೆಗಳು ನಡೆಯುತ್ತಿವೆ.
ಕೇಂದ್ರ ಶಿಕ್ಷಣ ಇಲಾಖೆಯ ಅಡಿಯಲ್ಲಿಯುಜಿಸಿ, ಆಂಗ್ಲ ಭಾಷೆಯ ಪಠ್ಯಪುಸ್ತಕಗಳನ್ನು ವಿವಿಧ ಭಾರತೀಯ ಭಾಷೆಗಳಿಗೆ ಅನುವಾದ ಮಾಡಿಸುವ ನಿಟ್ಟಿನಲ್ಲಿ ಹಲವು ಪ್ರಕಾಶರಿಗೆ ಜವಾಬ್ದಾರಿ ವಹಿಸುವ ಕಾರ್ಯವನ್ನು ಆರಂಭಿಸಿದೆ. ಪ್ರಸ್ತುತ ಬೆಂಗಳೂರಿನಲ್ಲಿರುವ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಬಿ.ಎ., ಬಿ.ಎಸ್‌ಸಿ, ಅಥವಾ ಬಿ.ಕಾಂ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಕನ್ನಡ ಮಾಧ್ಯ ಮಾಧ್ಯಮದ ಬೋಧನೆ ಲಭ್ಯವಿಲ್ಲ. ಆದಾಗ್ಯೂ, ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಉತ್ತರಿಸುವ ಆಯ್ಕೆಯನ್ನು ಒದಗಿಸಲಾಗುತ್ತಿದೆ.
“ದೆಹಲಿ, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಈಗಾಗಲೇ ಅನೇಕ ಕೋರ್ಸುಗಳನ್ನು ಅಧಿಕೃತವಾಗಿ ಹಿಂದಿಯಲ್ಲೇ ಬೋಧನೆ ಮಾಡಲಾಗುತ್ತಿದೆ. ತಾಂತ್ರಿಕ ಹಾಗೂ ವೈದ್ಯಕೀಯ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಹಿಂದಿಯಲ್ಲೇ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಅಧಿಕೃತವಾದ ಕೋರ್ಸುಗಳು ಲಭ್ಯವಿಲ್ಲ. ಕೆಲವು ಇಂಜಿನಿಯರಿAಗ್ ಕಾಲೇಜುಗಳು ಕನ್ನಡ ಮಾಧ್ಯಮದ ಕೋರ್ಸುಗಳು ಹಾಗೂ ಪಠ್ಯಪುಸ್ತಕಗಳನ್ನು ಪರಿಚಯಿಸಿವೆ. ಆದರೆ ಪ್ರತಿಕ್ರಿಯೆ ಅಷ್ಟೇನೂ ಚೆನ್ನಾಗಿಲ್ಲ.
ಕರ್ನಾಟಕದಲ್ಲಿ ಅನೇಕ ಆಂಗ್ಲ ಪದಗಳಿಗೆ ಕನ್ನಡದಲ್ಲಿ ಸರಿಯಾದ ಪದಗಳು ಲಭ್ಯವಿಲ್ಲ ಎಂಬ ತಪ್ಪು ಕಲ್ಪನೆಯಿದೆ, ಅದರಲ್ಲಿಯೂ ವಿಶೇಷವಾಗಿ ವಿಜ್ಞಾನ ಕೋರ್ಸುಗಳಲ್ಲಿ. ಕನ್ನಡದಲ್ಲಿ ಸಾಕಷ್ಟು ಪಠ್ಯಪುಸ್ತಕಗಳು ಲಭ್ಯವಿದ್ದರೆ, ಈ ತಪ್ಪು ಕಲ್ಪನೆ ಅಳಿಸಬಹುದು,” ಎನ್ನುವುದು ನೃಪತುಂಗ ವಿಶ್ವವಿದ್ಯಾಲಯದ ಸ್ಥಾಪಕ ಉಪಕುಲಪತ ಪ್ರೊ. ಶ್ರೀನಿವಾಸ್ ಎಸ್. ಬಳ್ಳಿ ಅವರ ಅಭಿಪ್ರಾಯವಾಗಿದೆ.
ವಿದ್ಯಾರ್ಥಿಗಳಿಗೆ ಮಿಶ್ರ ಮಾಧ್ಯಮದಲ್ಲಿ (ಕನ್ನಡ ಹಾಗೂ ಆಂಗ್ಲ ಎರಡೂ ಭಾಷೆಗಳಲ್ಲಿ) ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ಅವಕಾಶ ನೀಡುವ ಕಉರಿತು ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ವಿಶ್ವವಿದ್ಯಾಲಯಗಳು ತಿಳಿಸಿವೆ. “ಕರ್ನಾಟಕದಲ್ಲಿ ಕನ್ನಡ ಅಧಿಕೃತ ಭಾಷೆಯಾಗಿದೆ. ಆದರೆ ಈಗಲೂ ಸಹ ಅನೇಕ ಕಾಲೇಜುಗಳಲ್ಲಿ ವಿಶೇಷವಾಗಿ ಸಾರ್ವಜನಿಕ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಅನಧಿಕೃತವಾಗಿ ಕನ್ನಡ ಬೋಧನೆ ಮಾಡಲಾಗುತ್ತಿದೆ.
ಈ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಧ್ಯಾಪಕರುಗಳೂ ಸಹ ಆಂಗ್ಲ ಭಾಷೆಯಲ್ಲಿ ಅಷ್ಟು ಪರಿಣಿತಿಯನ್ನು ಹೊಂದದೇ ಇರುವುದು ಇದಕ್ಕೆ ಕಾರಣವಾಗಿದೆ. ಈ ಕಾಲೇಜುಗಳಲ್ಲಿ ಬಳಸುವ ಆಂಗ್ಲ ಭಾಷೆಯ ಗುಣಮಟ್ಟವೂ ಬಹಳ ಕಳಪೆಯಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಿಂದ ಬರುವಂತಹ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ಎಂದರೆ ಭಯವುಂಟಾಗುತ್ತದೆ.
ಹಾಗಾಗಿ, ಇಂತಹ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನು ಮಿಶ್ರ ಮಾಷೆಗಳಲ್ಲಿ ಉತ್ತರ ಬರೆಯಲು ಅವಕಾಶ ನೀಡುವುದು ಉತ್ತಮ ಆಯ್ಕೆ,” ಎನ್ನುತ್ತಾರೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ನಿರಂಜನ್ ವಾನಳ್ಳಿ. ಕಾಲೇಜುಗಳಲ್ಲಿ ಔಪಚಾರಿಕ ಪಠ್ಯಪುಸ್ತಕಗಳ ಕೊರತೆ ಹಾಗೂ ರಚನೆಯಿಂದಾಗಿ ವಿದ್ಯಾರ್ಥಿಗಳು ಬಳಸುವ ಕನ್ನಡ ಭಾಷೆಯ ಗುಣಮಟ್ಟವೂ ಸಹ ಕಳಪೆಯಾಗಿದೆ, ಎನ್ನುವುದು ಅವರ ಅಭಿಪ್ರಾಯವಾಗಿದೆ. “ಕೆಲವು ದಶಕಗಳ ಹಇಂದೆ ಒಂದು ತರಗತಿಯಲ್ಲಿ ೨೦ ವಿದ್ಯಾರ್ಥಿಗಳಿದ್ದರೆ, ಅದರಲ್ಲಿ ೧೮ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಪರೀಕ್ಷೆ ಎದುರಿಸುತ್ತಿದ್ದರು ಹಾಗೂ ಉಳೀದವರು ಕನ್ನಡದಲ್ಲಿ ಬರೆಯುತ್ತಿದ್ದರು. ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ. ೨೦ರಲ್ಲಿ ೧೮ ವಿದ್ಯಾರ್ಥಿಗಳು ಕನ್ನಡದಲ್ಲಿ ಉತ್ತರಿಸಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರು ಬಳಸುವ ಕನ್ನಡ ಭಾಷೆಯ ಗುಣಟ್ಟವೂ ಕಳಪೆಯಾಗಿದೆ. ಹಾಗಾಗಿ ಪಠ್ಯಪುಸ್ತಕಗಳನ್ನು ಮಾತೃಭಾಷೆಯಲ್ಲಿ ಒದಗಿಸಿದರೆ ಇಂತಹ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತದೆ,” ಎಂದು ವಿವರಿಸಿದರು.
ಯುಜಿಸಿ ಉನ್ನತ ಮಟ್ಟದ ಕೋರ್ಸುಗಳನ್ನೂ ಸಹ ಮಾತೃ ಭಾಷೆಯಲ್ಲಿ ಒದಗಿಸಲು ಪ್ರೋತ್ಸಾಹ ನೀಡಿದೆ. ಭವಿಷ್ಯದಲ್ಲಿ ಅಪ್ಪಟ ಕನ್ನಡದಲ್ಲೇ ಕೋರ್ಸುಗಳನ್ನು ಪರಿಚಯಸುವ ನಿರೀಕ್ಷೆಯಿದೆ.
“ಪ್ರಸ್ತುತ, ಕೋರ್ಸುಗಳನ್ನು ಆಂಗ್ಲ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಒದಗಿಸಲಾಗುತ್ತಿದೆ. ಆದರೆ ವಿಶೇಷವಾಗಿ ಕನ್ನಡ ಮಾಧ್ಯಮದಲ್ಲಿಯೇ ಕೋರ್ಸುಗಳಿಲ್ಲ. ಮೇಲಾಗಿ ಕೇವಲ ಭಾಷಾ ಕೋರ್ಸುಗಳಿಗೆ ಮಾತ್ರ ಕನ್ನಡದಲ್ಲಿ ಪಠ್ಯಪುಸ್ತಕಗಳು ಲಭ್ಯವಿದೆ,” ಎನ್ನುತ್ತಾರೆ ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ಉಪಕುಲಪತಿ ಲಿಂಗರಾಜ ಗಾಂಧಿ ಅವರು.
ಸುದ್ದಿ ಮೂಲ: ಬೆಂಗಳೂರ್ ಮಿರರ್

key words: Soon- B.Com.- B.Sc., B.A.- Exams – Kannada.