ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ ಸೆಮೀಸ್’ನಲ್ಲಿ ಸೋಲು ಕಂಡ ಸಿಂಧು

ಬರ್ಮಿಂಗ್ ಹ್ಯಾಮ್, 21 ಮಾರ್ಚ್ 2021 (www.justkannada.in): ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ಸ್ ನಲ್ಲಿ ಭಾರತದ ಸ್ಫೂರ್ತಿದಾಯಕ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸೋಲು ಕಂಡಿದ್ದಾರೆ.

ಚಾಂಪಿಯನ್ ಸಿಂಧು ಥಾಯ್ಲೆಂಡ್​ನ ಪಾರ್ನ್‌ಪಾವೀ ಚೊಚುವಾಂಗ್ ಗೆ ಮಣಿದು ಟೂರ್ನಿಯಿಂದ ಹೊರನಡೆದಿದ್ದಾರೆ. 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು 17-21 9-21 ಅಂತರದಿಂದ ಸೋಲುಂಡರು.

ಸಿಂಧು ಪಂದ್ಯಾವಳಿಯ 2018 ರ ಆವೃತ್ತಿಯಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಸಹ ಸೋಲು ಕಂಡಿದ್ದರು.