ಪಿಎಫ್ ಐ ಸಿದ್ಧರಾಮಯ್ಯನವರ ಪಾಪದ ಕೂಸು- ಮಾಜಿ ಸಿಎಂ ಬಿಎಸ್ ವೈ ಕಿಡಿ.

Promotion

ಬೆಂಗಳೂರು,ಸೆಪ್ಟಂಬರ್,29,2022(www.justkannada.in): ನಿನ್ನೆ ಪಿಎಫ್ ಐ ಸಂಘಟನೆಯನ್ನ ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೆ ಆರ್ ಎಸ್ ಎಸ್ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆ ನೀಡಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪಿಎಫ್ ಐ ಸಿದ್ದರಾಮಯ್ಯನವರ ಪಾಪದ ಕೂಸು. ಅವರ ಅಪರಾಧದಿಂದ ಇಷ್ಟೆಲ್ಲಾ ಅನಾಹುತವಾಗಿದೆ. ಇಡೀ ದೇಶದ ಜನರು ನಮ್ಮ ಜೊತೆಗಿದ್ದಾರೆ. ಇದನ್ನ ನೋಡಿ  ಸಿದ್ಧರಾಮಯ್ಯಗೆ ಸಹಿಸಲಾಗುತ್ತಿಲ್ಲ. ಏನೂ ತೋಚದೆ  ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ಧರಾಮಯ್ಯ ತಮ್ಮ ತಪ್ಪಿನ ಅರಿವಾಗಿ ನಾಡಿನ ಜನರ ಕ್ಷಮೆ ಕೇಳಬೇಕಿತ್ತು. ಈಗಲಾದರೂ ಸಿದ್ಧರಾಮಯ್ಯ ಜಾಗೃತರಾಗಬೇಕು ಎಂದು ಬಿಎಸ್ ಯಡಿಯೂರಪ್ಪ ಟಾಂಗ್ ನೀಡಿದರು.

Key words: sin – PFI -Siddaramaiah- Former CM- BS yeddyurappa