ಯೋಗ ತವರು ಮೈಸೂರಲ್ಲಿ ಸರಳ ಯೋಗಾ ದಿನಾಚರಣೆ

kannada t-shirts

ಮೈಸೂರು, ಜೂನ್ 21, 2020 (www.justkannada.in): 6ನೇ ಅಂತರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ  ಯೋಗ ತವರು ಮೈಸೂರಲ್ಲಿ ಸರಳವಾಗಿ ಯೋಗ ದಿನವನ್ನು ಆಚರಿಸಲಾಯಿತು.

ಪ್ರತಿ ವರ್ಷ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯುತ್ತಿದ್ದ ಯೋಗ ದಿನವನ್ನು ಕೊರೊನ ಭೀತಿ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಅರಮನೆ ಆವರಣದಲ್ಲಿ ಯೋಗ ಮೈಸೂರಿನ ಜೆ.ಎಸ್.ಎಸ್, ಎಸ್.ಪಿ.ವೈ.ಎಸ್.ಎಸ್,ಮೈಸೂರು ಯೋಗ & ಸ್ಪೋರ್ಟ್ಸ್ ಫೌಂಡೇಶನ್, ಪತಂಜಲಿ ಯೋಗ ಸಮಿತಿ, ಮತ್ತು ವಿವಿಧ ಯೋಗ ಫೌಂಡೇಶನ್ ಸಂಯುಕ್ತಶ್ರಯದಲ್ಲಿ ಅರಮನೆ ಮುಂದೆ ಯೋಗ ದಿನಾಚರಣೆ ನಡೆಯಿತು.

ಅರಮನೆ ಮುಂಬಾಗದಲ್ಲಿ ಯೋಗ ಮಾಡಿದ ಯೋಗ ಪಟುಗಳು. ಶಂಕ ನಾದದ ಮೂಲಕ ಯೋಗ ಕಾರ್ಯಕ್ರಮಕೆ ಚಾಲನೆ ನೀಡಲಾಯಿತು. ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಯೋಗಾಭ್ಯಾಸ.

ಈ ಬಾರಿ ‘ವರ್ಚುವಲ್ ಟೆರಸ್ ಯೋಗ’ ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಆಚರಣೆ ನಡೆಯಿತು. ‘ಮನೆಯಲ್ಲಿ, ಮನೆಯವರೊಂದಿಗೆ ಯೋಗ’ ಎಂದ ಘೋಷಣೆ ಮಾಡುವ ಮೂಲಕ ಈ ಬಾರಿಯ ಯೋಗ ದಿನ ಆಚರಣೆ ನಡೆಯಿತು. ಯೋಗ ಮಾಡುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಯಿತು.

website developers in mysore