ಕಾಂಗ್ರೆಸ್ ಮುಗಿಸಲು ಸಾಧ್ಯವಿಲ್ಲ: ಮತ್ತೆ ಅಧಿಕಾರಕ್ಕೆ ಬರುತ್ತೇವೆ- ಒಗ್ಗಟ್ಟಿನ ಮಂತ್ರ ಜಪಿಸಿ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ ಸಿದ್ಧರಾಮಯ್ಯ.

ದಾವಣಗೆರೆ,ಆಗಸ್ಟ್,3,2022(www.justkannada.in): ನನ್ನ ಹಟ್ಟುಹಬ್ಬ ಆಚರಣೆಗೆ ಡಿಕೆ ಶಿವಕುಮಾರ್ ವಿರೋಧವಿದೆ ಎಂದು ಬಿಂಬಿಸುತ್ತಿದ್ದಾರೆ. ಆದರೆ ನನ್ನ ಮತ್ತು ಡಿಕೆಶಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಇದು ವಿರೋಧಿಗಳ ಪಿತೂರಿಯಾಗಿದೆ. ಮುಂದೆ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟ ಸಂದೇಶ ರವಾನಿಸಿದರು.

ದಾವಣಗೆರೆಯಲ್ಲಿ ನಡೆದ ತಮ್ಮ 75ನೇ ವರ್ಷದ ಜನ್ಮದಿನ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ಧರಾಮಯ್ಯ, ಕಾರ್ಯಕ್ರಮಕ್ಕೆ ಆಗಮಿಸಿದ ರಾಹುಲ್ ಗಾಂಧಿಗೆ ಧನ್ಯವಾದಗಳು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದಗಳು.  ನನ್ನ ಮೇಲೆ ರಾಹುಲ್ ಗಾಂಧಿ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ನಾನು ಕಾಂಗ್ರೆಸ್ ಸೇರಿದಾಗಿನಿಂದಲೂ ನನ್ನ ಮೇಲೆ ವಿಶೇಷ ಪ್ರೀತಿ ಇದೆ. ನಾನು ಸಿಎಂ ಆಗಲು ಸೋನಿಯಾ ಗಾಂಧಿ ಮತ್ತು ರಾಹುಲ್  ಗಾಂಧಿ ಅವರೇ ಕಾರಣ. ನಾನು ಬೇರೆ ಪಕ್ಷದಿಂದ ಬಂದರೂ ಸಹ ವಿಶೇಷ ಗೌರವ ತೋರಿಸುತ್ತಾರೆ. ನನಗೆ ಸೋನಿಯಾ ರಾಹುಲ್ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ರಾಹುಲ್ ಗಾಂಧಿ ಅವರಿಗೆ ಕೋಟಿ ಕೋಟಿ ನಮನ ಎಂದರು.

ನಾನು ಎಂದಿಗೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ ನನ್ನ ಸ್ನೇಹಿತರು, ಹಿತೈಷಿಗಳು ಆಚರಿಸಿದ್ದಾರೆ. ಅವರ ಆಸೆಗೆ ಒಪ್ಪಿಗೆ ನೀಡಿದೆ.  ನನ್ನ ಹುಟ್ಟುಹಬ್ಬ ಆಚರಣೆಗೆ ಡಿಕೆ ಶಿವಕುಮಾರ್ ವಿರೋಧವಿದೆ ಎಂದು ಬಿಂಬಿಸುತ್ತಿದ್ದಾರೆ.  ಡಿಕೆಶಿ ನನ್ನ ಮಧ್ಯೆ ಬಿರುಕು ಇದೆ ಎಂದು ಬಿಂಬಿಸುತ್ತಾರೆ. ಇದು ವಿರೋಧಿಗಳ ಪಿತೂರಿ. ನಾವು ಡಿಕೆ ಶಿವಕುಮಾರ್ ಒಗ್ಗಟ್ಟಾಗಿದ್ದೇವೆ ಯಾವುದೇ ಭೀನ್ನಾಭಿಪ್ರಾಯವಿಲ್ಲ. ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರವನ್ನ ಕಿತ್ತೊಗೆಯಲು ನೀವು ಪಣ ತೊಡಬೇಕು. ಕೋಮುವಾದಿ ಭ್ರಷ್ಟ ಸರ್ಕಾರವನ್ನ ನನ್ನ ಜೀವನದಲ್ಲೇ ನೋಡಿಲ್ಲ. ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದೇ ಬಿಜೆಪಿ ಗುರಿಯಾಗಿದೆ.  ಮೋದಿ ಪ್ರಧಾನಿಯಾದ ಬಳಿಕ ದೇಶ ಸಾಕಷ್ಟು ಸಂಕಷ್ಟಕ್ಕೀಡಾಗಿದೆ.   ಮೋದಿ 8 ವರ್ಷದಿಂದ ಆಡಳಿತ ಮಾಡುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯನ್ನ ಹಾಳು ಮಾಡಿದ್ದಾರೆ.  ಕಾಂಗ್ರೆಸ್ ಸಂವಿಧಾನ ಬದಲಿಸೋಕೆ ಈ ದೇಶದ ಜನ ಬಿಡಲ್ಲ. ಕಾಂಗ್ರೆಸ್ ನಾಶ ಮಾಡುವ ಬಿಜೆಪಿಯ ಕನಸು ನನಸಾಗಲ್ಲ, ರಾಹುಲ್ ಗಾಂಧಿ ಈ ದೇಶದ ಆಶಾಕಿರಣ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ ಎಂದರು ಹೇಳಿದರು.

ಅಚ್ಚೇದಿನ್ ಅಂತ ಹೇಳಿ ಅಧಿಕಾರಕ್ಕೆ ಬಂದಿದ್ದ ಪ್ರಧಾನಿ ಮೋದಿ ಆದ್ರೆ ದೇಶಕ್ಕೆ ಅಚ್ಚೇದಿನ್ ಬಂತಾ. ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಸಾಲ ಹೆಚ್ಚಗಿದೆ. ರೈತರು ಹಿಂದುಳಿದವರಿಗೆ ನ್ಯಾಯ ಒದಗಿಸಲು ಆಗಿಲ್ಲ. ಯುವಕರಿಗೆ ಉದ್ಯೋಗ ಕೊಡಲು ನಿಮ್ಮ ಕೈಯಲ್ಲಿ ಆಗಿಲ್ಲ. ಅಗತ್ಯ ವಸ್ತುಗಳ ಬೆಲೆ ಮಿತಿ ಮೀರಿದೆ ಎಂದು ಕಿಡಿಕಾರಿದರು.

ನೀವು ಕೇವಲ ಒಂದು ಧರ್ಮಕ್ಕೆ ಮಾತ್ರ ಮುಖ್ಯಮಂತ್ರಿನಾ..? ಸಿಎಂ ಬೊಮ್ಮಾಯಿ ವಿರುದ್ಧ ಕಿಡಿ.

ದಕ್ಷಿಣ ಕನ್ನಡದಲ್ಲಿ ಮೂವರು ಯುವಕರ ಕೊಲೆಯಾಗಿದೆ. ಆದರೆ ಪ್ರವೀಣ್ ಗೆ ಮಾತ್ರ ರಾಜ್ಯ ಸರ್ಕಾರ ಪರಿಹಾರ ನೀಡಿದೆ.  ಮಸೂದ್, ಫಾಜಿಲ್ ಕುಟುಂಬಕ್ಕೆ ಯಾಕೆ ಪರಿಹಾರ ನೀಡಲ್ಲ. ಕೇವಲ ಒಂದು ಧರ್ಮಕ್ಕೆ ಮಾತ್ರ ಮುಖ್ಯಮಂತ್ರಿನಾ..? ನೀವು ಸಿಎಂ ಆಗಿ ಮುಂದುವರೆಯಲು ಯಾವ ನೈತಿಕತೆ ಇದೆ. ನೀವು ರಾಜ್ಯ ಆಳಲು ಲಾಯಕ್ಕಾ..? ಎಂದು ಸಿಎಂ ಬೊಮ್ಮಾಯಿ ವಿರುದ್ಧ ಕಿಡಿ ಕಾರಿದರು.

ಸೋನಿಯಾ  ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದವರು. ದೇಶದಲ್ಲಿ ಜನಪರ ಯೋಜನೆ ಜಾರಿ ಮಾಡಲು ಸೋನಿಯಾ ಗಾಂಧಿ ಕಾರಣ.  ರಾಹುಲ್ ಗಾಂಧಿಯವರನ್ನ 50 ಗಂಟೆಗಳ ಕಾಲ ವಿಚಾರಣೆ ನಡೆಸಿದಿರಿ. ಸೊನಿಯಾ ಗಾಂಧಿ ಅವರನ್ನ ಸುಮ್ಮನೆ ವಿಚಾರಣೆ ನಡೆಸಿದಿರಿ. ದೇಶದಲ್ಲಿ ದ್ವೇಷದ ರಾಜಕಾರಣ ಮಾಡುತ್ತೀರಾ..? ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ನಾನು ಸಿಎಂ ಆಗಿದ್ದಾಗ ನುಡಿದಂತೆ ನಡೆದಿದ್ದೇನೆ.  ಅನ್ನಭಾಗ್ಯ, ಕ್ಷೀರಾಭಾಗ್ಯ, ಇಂದಿರಾ ಕ್ಯಾಂಟಿನ್ ಪಶುಭಾಗ್ಯ, ವಿದ್ಯಾಸಿರಿ ಮಾತೃಶ್ರೀ ಯೋಜನೆ ಜಾರಿ ಮಾಡಿದ್ದು ಕಾಂಗ್ರೆಸ್. ನೀವು ಏನು ಮಾಡಿದ್ದೀರಿ  ಬೊಮ್ಮಾಯಿ ಅವರೇ,. ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಬೇಕೋ ಬೇಡವೋ..?  ಎಂದು ವಾಗ್ದಾಳಿ ನಡೆಸಿದರು.

Key words: siddaramotsava-Congress –former CM-Siddaramaiah – BJP.