“ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬಿಟ್ಟು ಪ್ರಬುದ್ಧರಾಗಿ ಮಾತಾಡಲಿ” : ಮಾಜಿ ಸಿಎಂ ಎಚ್.ಡಿ.ಕೆ ಸಲಹೆ

kannada t-shirts

ಬೆಂಗಳೂರು,ಫೆಬ್ರವರಿ,12,2021(www.justkannada.in) : ಉಪಚುನಾವಣೆಗಳು ಅಧಿಕಾರಸ್ಥರ, ದುಡ್ಡಿರುವವರ ಚುನಾವಣೆಗಳು. ಈ ಚುನಾವಣೆಗಳು ನಡೆಯುವ ರೀತಿಯೇ ಬೇರೆ. ಪ್ರತಿಷ್ಠೆಯ ಈ ಹೋರಾಟದಲ್ಲಿ ಸ್ಪರ್ಧಿಸದೇ ಇರುವ ಪಕ್ಷವೊಂದರ ನಿಲುವನ್ನು ಟೀಕಿಸುವ ಮುನ್ನ ಯಾರೇ ಆದರೂ ಯೋಚಿಸಬೇಕು. ಇಲ್ಲವಾದರೆ ಟೀಕೆಯೇ ಅವರಿಗೆ ಮುಳುವಾಗುತ್ತದೆ‌. ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬಿಟ್ಟು ಪ್ರಬುದ್ಧರಾಗಿ ಮಾತಾಡಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.jk

ಉಪಚುನಾವಣೆಗಳಲ್ಲಿ ನೀವು ಮಾಡಿದ ಕುತಂತ್ರಗಳನ್ನು ನೆನಪಿಸಲೇ? 

ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ‌. ಆದರೆ, ಬೇರೆ ಪಕ್ಷಗಳಿಗೆ ಬೆಂಬಲ ನೀಡುತ್ತೇವೆ ಎಂದೇನಾದರೂ ಹೇಳಿದ್ದಾರಾ? ಉಪಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ ಇತಿಹಾಸ ಇರುವುದು ಜೆಡಿಎಸ್ ಗೆ ಅಲ್ಲ, ತಮಗೆ? 2008ರಲ್ಲಿ ನಡೆದ ಆಪರೇಷನ್ ಕಮಲದ ಉಪಚುನಾವಣೆಗಳಲ್ಲಿ ನೀವು ಮಾಡಿದ ಕುತಂತ್ರಗಳನ್ನು ನೆನಪಿಸಲೇ? ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ವತಂತ್ರ ಪಕ್ಷ ಕಟ್ಟಿ,5 ಸ್ಥಾನಗಳನ್ನು ಗೆದ್ದು ತೋರಿಸಿ ಎಚ್.ಡಿ.ಕೆ ಸವಾಲು

ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ ಕಟ್ಟಿ, ತಾವೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿ ಆಮೇಲೆ ಜೆಡಿಎಸ್ ಬಗ್ಗೆ, ಜೆಡಿಎಸ್ ನಾಯಕತ್ವದ ಬಗ್ಗೆ ಮಾತಾಡಬೇಕು ಎಂದು ಸವಾಲು ಹಾಕುತ್ತಲೇ ಬಂದಿದ್ದೇನೆ. ಸವಾಲು ಸ್ವೀಕರಿಸಲಾಗದ ಸಿದ್ದರಾಮಯ್ಯ, ಜೆಡಿಎಸ್ ಅನ್ನು ಟೀಕಿಸುವುದರಲ್ಲೇ ತಮ್ಮ ಶಕ್ತಿಯ ಪರೀಕ್ಷೆ ಮಾಡಿಕೊಳ್ಳುತ್ತಿರುವಂತಿದೆ ಎಂದು ಟೀಕಿಸಿದ್ದಾರೆ.

Siddaramaiah,Udafe,words,Leave,mature,Let's talk,Former CM,HDK,Advice

ಸಿದ್ದರಾಮಯ್ಯನಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ

ಜೆಡಿಎಸ್ ನಲ್ಲಿದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿ, ಹೊರಬಿದ್ದ ಮೇಲೆ ಸಿದ್ದರಾಮಯ್ಯ‌ನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಜೆಡಿಎಸ್  ಶಕ್ತಿ ಎಲ್ಲಿದೆ ಎಂಬ ಅವರ ಹೇಳಿಕೆಗಳು, ಜೆಡಿಎಸ್ ಗೆ ಅವರು ಬಗೆದ ದ್ರೋಹದ ಪ್ರತೀಕ. ನಮ್ಮ ಬಗ್ಗೆ ಮಾತಾಡುವ ಅಧಿಕಾರ ಅವರಿಗಿಲ್ಲ ಎಂದು ಕಿಡಿಕಾರಿದ್ದಾರೆ.

ಜೆಡಿಎಸ್ ನ ಸಾಮರ್ಥ್ಯ ತೋರಿಸುವವರೆಗೆ ತಾಳಿ

ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ಇರುವ ಶಕ್ತಿ ಮತ್ತು ಸಾಮರ್ಥ್ಯ ಪ್ರದರ್ಶನಕ್ಕೆ ಇನ್ನೂ ಸಮಯವಿದೆ. ವೇದಿಕೆಯೂ ಸಿಗಲಿದೆ. ಆಗ ಸಿದ್ದರಾಮಯ್ಯನವರು ನಮ್ಮ ಜೊತೆ ಚರ್ಚೆಗೆ, ಸೆಣಸಾಟಕ್ಕೆ ಬರಲಿ. ಒಂದುವೇಳೆ ಅವರೇ ಒಂದು ಪಕ್ಷವನ್ನೇನಾದರೂ ಕಟ್ಟಿದರೆ ಅದಕ್ಕೂ ಜೆಡಿಎಸ್ ನ ಸಾಮರ್ಥ್ಯ ತೋರಿಸುವ ಕೆಲಸ ಮಾಡೋಣವಂತೆ‌. ಅಲ್ಲಿಯವರೆಗೆ ಅವರು ತಾಳಲಿ ಎಂದಿದ್ದಾರೆ.Central,Budget,Presentation,About,Former CM,H.D.Kumaraswamy,Commented

ಜೆಡಿಎಸ್ ಕಣದಿಂದ ಹಿಂದೆ ಸರಿಯುವುದನ್ನು ಗೇಲಿ ಮಾಡುವ ಮುನ್ನ ಸಿದ್ದರಾಮಯ್ಯರಿಗೆ ಗುಂಡ್ಲುಪೇಟೆ, ನಂಜನಗೂಡು ನೆನಪಾಗಬೇಕಿತ್ತು? ಅಂದು ದೇವೇಗೌಡರು ಜಾತ್ಯತೀತ ನಿಲುವಿಗೆ ಕಟ್ಟುಬಿದ್ದು ಕಾಂಗ್ರೆಸ್ ಬೆಂಬಲಿಸಿದ್ದರು. ಆ ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಸಾಕಷ್ಟು ಬಲವಿತ್ತು. ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಜೆಡಿಎಸ್ ನವರಾಗಿದ್ದರು ಎಂದು ಟ್ವೀಟ್ ಮೂಲಕ ನೆನಪಿಸಿದ್ದಾರೆ.

ENGLISH SUMMARY…

Let Siddaramaiah stop speaking lightly and become mature: Former CM HDK
Bengaluru, Feb. 12, 2021 (www.justkannada.in): “By-elections are for those who have power and money. The way these by-elections are held is different. Anyone who criticizes a party that is not contesting in such a self-prestige fight should think before doing so. Otherwise, their criticism will turn a thorn for themselves. Let Siddaramaiah stop speaking lightly and become more mature,” opined former Chief Minister H. D. Kumaraswamy.
“H. D. Devegowda has said that JDS won’t contest in the by-elections. But has he told us that we will support some other party? JDS doesn’t have a history of supporting BJP it is you who have supported it. Do you want me to recall all those cunning games that you played during the BJP by-elections held in 2008?” he warned.Let Siddaramaiah stop speaking lightly and become mature: Former CM HDK Bengaluru, Feb. 12, 2021 (www.justkannada.in): "By-elections are for those who have power and money. The way these by-elections are held is different. Anyone who criticizes a party that is not contesting in such a self-prestige fight should think before doing so. Otherwise, their criticism will turn a thorn for themselves. Let Siddaramaiah stop speaking lightly and become more mature," opined former Chief Minister H. D. Kumaraswamy. "H. D. Devegowda has said that JDS won't contest in the by-elections. But has he told us that we will support some other party? JDS doesn't have a history of supporting BJP it is you who have supported it. Do you want me to recall all those cunning games that you played during the BJP by-elections held in 2008?" he warned. "There is still time for JDS to shot its strength and capability in North Karnataka. We will get a platform to show our strength, let Siddaramaiah come for a discussion with us at that time. If ever he builds a party on his own, JDS has the strength to show its capacity to that party too. Let him have patience till then," he added. Keywords: Former CM H.D. Kumaraswamy/ Siddaramaiah/ by-elections/ JDS
“There is still time for JDS to shot its strength and capability in North Karnataka. We will get a platform to show our strength, let Siddaramaiah come for a discussion with us at that time. If ever he builds a party on his own, JDS has the strength to show its capacity to that party too. Let him have patience till then,” he added.
Keywords: Former CM H.D. Kumaraswamy/ Siddaramaiah/ by-elections/ JDS

key words : Siddaramaiah-Udafe-words-Leave-mature-Let’s talk-Former CM-HDK-Advice

website developers in mysore