125 ಶಾಸಕರಿದ್ಧ ಕಾಂಗ್ರೆಸ್ 75ಕ್ಕೆ ಬರಲು ಸಿದ್ಧರಾಮಯ್ಯನ ದುರಾಡಳಿತವೇ ಕಾರಣ- ಸಚಿವ ಆರ್.ಅಶೋಕ್ ಟೀಕೆ.

ದೊಡ್ಡಬಳ್ಳಾಪುರ,ಅಕ್ಟೋಬರ್,26,2021(www.justkannada.in): ಸಿದ್ದರಾಮಯ್ಯ ರಾಜ್ಯದಲ್ಲಿ 60 ತಿಂಗಳು ಅಧಿಕಾರ ನಡೆಸಿದ್ರು. 125 ಶಾಸಕರಿದ್ಧ ಕಾಂಗ್ರೆಸ್ 75ಕ್ಕೆ ಬರಲು ಸಿದ್ಧರಾಮಯ್ಯನ ದುರಾಡಳಿತವೇ ಕಾರಣ ಎಂದು ಸಚಿವ ಆರ್.ಅಶೋಕ್ ಟೀಕಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಚಿವ ಅಶೋಕ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏನು ಅಭಿವೃದ್ಧಿ ಮಾಡಿದ್ದಾರೆಂದು ಕೇಳ್ತಾರೆ. ಹೀಗೆ ಕೇಳುವ ಸಿದ್ದರಾಮಯ್ಯ ಏನು ಅಭಿವೃದ್ಧಿ ಮಾಡಿದ್ದಾರೆ. ಸಿದ್ಧರಾಮಯ್ಯ 125 ಶಾಸಕರಿದ್ದ ಕಾಂಗ್ರೆಸ್‌ ಪಕ್ಷವನ್ನು 75ಕ್ಕೆ ತಂದು ನಿಲ್ಲಿಸಿದ್ರು. ಸಿದ್ದರಾಮಯ್ಯ ದುರಾಡಳಿತದಿಂದ 55 ಶಾಸಕರು ಸೋತಿದ್ದರು. ಗೆದ್ದಿದ್ದ ಶಾಸಕರಲ್ಲಿಯೂ 12 ಜನರು ಬಿಟ್ಟು ಹೋದರು. ಸಿದ್ದರಾಮಯ್ಯ ದುರಾಡಳಿತ, ದಾದಾಗಿರಿಯಿಂದ ಬಿಟ್ಟುಹೋದ್ರು ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಕಾಂಗ್ರೆಸ್ ಮೈತ್ರಿಯಾಗಿದೆ. ಹಿಂದುತ್ವ ವಿಚಾರದಲ್ಲಿ ಬಿಜೆಪಿಗಿಂತ ಶಿವಸೇನೆ ಕಠೋರ. ಹಾಗಾದ್ರೆ ಅಲ್ಲಿ ಹೇಗೆ ಮೈತ್ರಿ ಮಾಡಿಕೊಂಡಿದ್ದೀರೆಂದು ಪ್ರಶ್ನೆ ಮಾಡಿದರು.

ಈ ಹಿಂದೆ ನಿತೀಶ್ ಬಿಜೆಪಿ ಜೊತೆ 15 ವರ್ಷ ಸರ್ಕಾರ ಮಾಡಿತ್ತಲ್ವಾ ಅವರ ಜೊತೆಯು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿತ್ತು. ನೀವು ಹೊಂದಾಣಿಕೆ ಮಾಡಿಕೊಂಡ್ರೆ ಜಾತ್ಯಾತೀತ, ನಾವು ಮಾಡಿಕೊಂಡ್ರೆ ಕೋಮುವಾದಿಯಾಗುತ್ತಾ? ಕಾಂಗ್ರೆಸ್ ಸಮಯಕ್ಕೆ ಸರಿಯಾಗಿ ಒಂದು ಆಟ ಆಡ್ತಾರೆ ಎಂದು  ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.

Key words: Siddaramaiah- reason -125 MLA come – 75 MLA- Minister- R. Ashok