ರಾಜಕೀಯದಲ್ಲಿರಲು ಸಿದ್ಧರಾಮಯ್ಯ ನಾಲಾಯಕ್-ನಳೀನ್ ಕುಮಾರ್ ಕಟೀಲ್.

Promotion

ರಾಯಚೂರು,ಫೆಬ್ರವರಿ,25,2023(www.justkannada.in): ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತೆ ವಾಗ್ದಾಳಿ ನಡೆಸಿದ್ದು, ರಾಜಕೀಯದಲ್ಲಿರಲು ಸಿದ್ಧರಾಮಯ್ಯ ನಾಲಾಯಕ್ ಎಂದಿದ್ದಾರೆ.

ಇಂದು ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಸಿದ್ಧರಾಮಯ್ಯ ಗೆದ್ದ ಬಾದಾಮಿ ಕ್ಷೇತ್ರದಲ್ಲೇ ಸ್ಪರ್ಧಿಸಲ್ಲ ಅಂತಿದ್ದಾರೆ. ಅಭಿವೃದ್ದಿ ಮಾಡಿದ್ದೇನೆಂದು ಹೇಳವ ಒಬ್ಬ ಮಾಜಿ ಸಿಎಂ ತಾವು ಗೆದ್ದ ಬಾದಾಮಿ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧಿಸಲ್ಲ ಅಂತಿದ್ದಾರೆ. ಎಂತಹ ನಾಚಿಕೆಗೇಡಿತನ ಇದು. ರಾಜಕೀಯದಲ್ಲಿರುವ ಸಿದ್ಧರಾಮಯ್ಯ ನಾಲಾಯಕ್ ಎಂದರು.

ಮಾಂಸ ತಿಂದು ಶಾಸಕ ಸಿಟಿ ರವಿ ದೇವಸ್ಥಾನಕ್ಕೆ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್,  ಮಾಂಸ ತಿಂದಿದ್ದು ನಿಜ. ಆದರೆ, ಮಾಂಸ ತಿಂದು ದೇಗುಲದ ಒಳ ಪ್ರವೇಶಿಸಿಲ್ಲ. ನಾಗಬನದ ಹೊರಗಡೆ ನಿಂತು ಕೈಮುಗಿದಿರುವುದಾಗಿ ಶಾಸಕ ಸಿಟಿ ರವಿ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಹಾಗಲ್ಲ. ಮಾಂಸ ತಿಂದು ನೇರವಾಗಿ ದೇಗುಲಕ್ಕೆ ಹೋಗಿದ್ದರು. ಅದರಲ್ಲೂ, ಮಾಂಸ ಸೇವಿಸಿ ಧರ್ಮಸ್ಥಳ ಕ್ಷೇತ್ರದ ಒಳಗಡೆ ತೆರಳಿದ್ದರು. ಇದುವೇ ಸಿದ್ದರಾಮಯ್ಯಗೂ ರವಿಗೂ ಇರುವ ವ್ಯತ್ಯಾಸ ಎಂದು ಕಿಡಿಕಾರಿದರು.

Key words: Siddaramaiah -Nalayak  – politics- Naleen Kumar Kateel