ಸಿದ್ದರಾಮಯ್ಯ ಮತ್ತೆ ಸಿಎಂ ವಿಚಾರ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಶಾಸಕ ಕೆಎಸ್ ಈಶ್ವರಪ್ಪ ಹಾಕಿದ ಸವಾಲೇನು ಗೊತ್ತೆ…

ಶಿವಮೊಗ್ಗ,ಮೇ,11,2019(www.justkannada.in): ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ತಮ್ಮ ಚೇಲಾಗಳನ್ನ ಬಿಟ್ಟು ಹೇಳಿಕೆ ನೀಡಿಸುತ್ತಿದ್ದಾರೆ. ಅವರನ್ನ ಕೆಪಿಸಿಸಿ ಅಧ್ಯಕ್ಷರು ಸಸ್ಪೆಂಡ್ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.

ಈ ಬಗ್ಗೆ ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಮತ್ತೆ ಸಿಎಂ ಖುರ್ಚಿಗೆ ಟವಲ್ ಹಾಕುತ್ತಿದ್ದು, ನಾವೇನೂ ಕಮ್ಮಿ ಅಂತಾ ಡಿ.ಕೆ.ಶಿವಕುಮಾರ್, ಪರಮೇಶ್ವರ್, ಎಂ.ಬಿ.ಪಾಟೀಲ್ ಸಹ ಟವಲ್ ಹಾಕುತ್ತಿದ್ದಾರೆ . ಅಲ್ಲದೆ ಸಿದ್ದರಾಮಯ್ಯ ಚೇಲಾಗಳನ್ನ ಬಿಟ್ಟು  ಮತ್ತೆ ಸಿಎಂ ಆಗಲಿ ಎಂದು ಎಲ್ಲಾ ಕಡೆ ಹೇಳಿಕೆ ಕೊಡಿಸುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಅವರ ಚೇಲಾಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಕಾಂಗ್ರೆಸ್​ನಲ್ಲಿ ಸ್ವಲ್ಪ ಶಿಸ್ತು ಉಳಿದಿದೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.

ಐದು ವರ್ಷ ಸರ್ಕಾರ ಇರಬೇಕು ಎಂಬುವುದು ನನ್ನ ಆಶಯ. ಆದರೆ ಸಮ್ಮಿಶ್ರ ಸರ್ಕಾರವನ್ನು ಅತಂತ್ರ ಮಾಡುವ ಯತ್ನವನ್ನು ಕಾಂಗ್ರೆಸ್‌ನವರೇ ಮಾಡುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ‌ ಎರಡು ಗುಂಪುಗಳು ನೇರವಾಗಿ ಹೊಡೆದಾಟ ಮಾಡಿ ಕೊಳ್ಳುತ್ತಿವೆ.  ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದರೂ ಬರಬಹುದು.  ಕಾಂಗ್ರೆಸ್ ಎಲ್ಲಾ ಬೆಳವಣಿಗೆ ನೋಡಿದರೇ ಹಾಗೆ ಅನಿಸುತ್ತೆ ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಸಿದ್ದರಾಮಯ್ಯ ಈ ಜನ್ಮದಲ್ಲಿ ಮತ್ತೆ ಸಿಎಂ ಆಗಲ್ಲ. ಅಪರೇಷನ್ ಜನಕ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಅಪರೇಷನ್ ಗೆ ಒಳಗಾಗಿದ್ದರು ಎಂದು ಲೇವಡಿ ಮಾಡಿದರು.

Key words: Siddaramaiah – again –CM-KPCC president- Dinesh Gundoorao -challenge -KS Eshwarappa.