ಸಿದ್ಧರಾಮಯ್ಯ ಸರ್ಕಾರದ ಸಾಧನೆಯನ್ನ ತಮ್ಮ ಪಕ್ಷದ ಸಾಧನೆಯಂತೆ ಬಿಂಬಿಸಿಕೊಳ್ಳುತ್ತಿದ್ದಾರೆ-ಸಚಿವ ಆರ್.ಅಶೋಕ್ ವಿರುದ್ದ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಕಿಡಿ..

ಮೈಸೂರು,ಜು,17,2020(www.justkannada.in): ಕುರುಬಾರಹಳ್ಳಿ ಸರ್ವೆ ನಂ 4, ಆಲನಹನಳ್ಳಿ ಗ್ರಾಮದ ಸರ್ವೆ ನಂ 41 ರ ಪ್ರದೇಶವನ್ನು ಬಿ ಖರಾಬಿನ ಆದೇಶದಿಂದ ಹೊರತುಪಡಿಸುವ ಸಂಬಂಧ ಕಂದಾಯ ಸಚಿವ ಆರ್. ಅಶೋಕ್ ಅವರು ನೀಡಿರುವುದು ಕೇವಲ ಪತ್ರವಷ್ಟೆ, ಅದು ಆದೇಶವಲ್ಲ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ತಿಳಿಸಿದ್ದಾರೆ.jk-logo-justkannada-logo

ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಎಂ.ಕೆ ಸೋಮಶೇಖರ್ , ಕುರುಬಾರಹಳ್ಳಿ ಸರ್ವೆ ನಂ 4, ಆಲನಹನಳ್ಳಿ ಗ್ರಾಮದ ಸರ್ವೆ ನಂ 41 ರ ಪ್ರದೇಶವನ್ನು ಬಿ ಖರಾಬಿನ ಆದೇಶದಿಂದ ಮುಕ್ತಗೊಳಿಸುವ ಸಂಬಂಧ ಮೊನ್ನೆ ಮಾನ್ಯ ಸಚಿವರಾದ ಅಶೋಕ್ ಅವರು ನೀಡಿರುವುದು ಕೇವಲ ಪತ್ರವಷ್ಟೆ, ಅದು ಆದೇಶವಲ್ಲ. ಮಾನ್ಯ ಸಚಿವರು ಜನತೆಯ ದಿಕ್ಕು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ನಿವಾಸಿಗಳಿಗೆ ಬಿ ಖರಾಬಿನಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ನಾನು 2 ವರ್ಷಗಳ ಕಾಲ ಸಾಕಷ್ಟು ಹೋರಾಟ ಮಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇನೆ ಎಂದರು.siddaramaiah-achievement-government-former-mla-mk-somashekhar-minister-r-ashok

ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ಆದೇಶ ಪತ್ರ ಹೊರಡಿಸಲಾಗಲಿಲ್ಲ. ಆ ಸಮಯದಲ್ಲಿ ಚುನಾವಣೆ ಬಂದಿದ್ದರಿಂದ ಆದೇಶ ಪತ್ರ ಹೊರಡಿಸಲು ಸಾಧ್ಯವಾಗಲಿಲ್ಲ. ಬಿ ಖರಾಬಿನ ಆದೇಶ ನಗರಾಭಿವೃದ್ಧಿ ಇಲಾಖೆಗೆ ವರ್ಗಾವಣೆಯಾಗಿದೆ. ವರ್ಗಾವಣೆಯಾಗಿರುವುದನ್ನೇ ಆದೇಶವಾಗಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಎಸ್. ಎ ರಾಮದಾಸ್ ಅವರು ಶಾಸಕರಾಗಿ ಎರಡು ವರ್ಷಗಳಾಗಿವೆ, ಅವರದ್ದೇ ಸರ್ಕಾರ ಬಂದು ಒಂದು ವರ್ಷವಾಗಿದೆ. ಸಿದ್ದರಾಮಯ್ಯನವರ ಸರ್ಕಾರದ ಸಾಧನೆಗಳನ್ನು ತಮ್ಮ ಪಕ್ಷದ ಸಾಧನೆಯೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಎಂ.ಕೆ ಸೋಮಶೇಖರ್ ಕಿಡಿಕಾರಿದರು.

Key words: Siddaramaiah -achievement – government-Former MLA -MK Somashekhar – Minister- R Ashok