ಜ್ವಾಲಾಮುಖಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ವಿಶೇಷ ಕ್ಯಾಲೆಂಡರ್ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್

Promotion

ಮೈಸೂರು, ಡಿಸೆಂಬರ್ 29, 2022 (www.justkannada.in): ನಗರದ ಜ್ವಾಲಾಮುಖಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಪ್ರತಿವರ್ಷದಂತೆ ಈ ಬಾರಿಯೂ ಡಾ.ರಾಜ್ ಕುಮಾರ್ ಅವರ ವಿಶೇಷ ಭಾವಚಿತ್ರಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ವಾಲಾಮುಖಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ  ಹೊರತಂದಿರುವ ಡಾ.ರಾಜ್ ಅವರ ವಿಶೇಷ ಭಾವಚಿತ್ರಗಳನ್ನು ಒಳಗೊಂಡ ಕ್ಯಾಲೆಂಡರ್ ಅನ್ನು ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಶಿವಣ್ಣ, ಮೈಸೂರಿನ ಒಡನಾಟವನ್ನು ಸ್ಮರಿಸಿದರು. ಡಾ.ರಾಜ್ ಕುಮಾರ್ ಹಾಗೂ ಜ್ವಾಲಾಮುಖಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ನಂಟನ್ನು ಸ್ಮರಿಸಿದರು.

ಇದೇ ವೇಳೆ ಶಿವರಾಜ್ ಕುಮಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಗದೀಶ್, ಸಂದೇಶ್, ಮಂಜು, ರವಿ, ವಿಶ್ವ ಭಟ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ‌‌ ವರನಟ ಡಾ.ರಾಜ್ ಕುಮಾರ್ ಕೂಡ ನೆರವಿಗೆ ನಿಂತಿದ್ದರು. ಇದಕ್ಕಾಗಿ ಬರ ಪರಿಹಾರ ನಿಧಿ‌ ಸಂಗ್ರಹಕ್ಕೆ ಕೈಜೋಡಿಸಿದ್ದರು. ಈ ವೇಳೆ ಮೈಸೂರಿನಲ್ಲಿ ಜ್ಚಾಲಾಮುಖಿ‌ ಸಂಘ ಕೂಡ ಅಣ್ಣವ್ರ ಜೊತೆ ನಿಂತು ನಿಧಿ‌ ಸಂಗ್ರಹದಲ್ಲಿ ಪಾಲ್ಗೊಂಡಿದ್ದ‌‌‌ ವಿಷಯವನ್ನು ‌ಸಂಘದ ಅಧ್ಯಕ್ಷ ಜಗದೀಶ್ (ಜಗ್ಗಿ) ನೆನೆದರು.