ದುನಿಯಾ ವಿಜಯ್ ತಂಡದೊಂದಿಗೆ ಸಲಗ ನೋಡಿದ ಶಿವಣ್ಣ

ಬೆಂಗಳೂರು, ಅಕ್ಟೋಬರ್ 22, 2021 (www.justkannada.in): ಒರಿಯಾನ್ ಮಾಲ್ ನಲ್ಲಿ ಸಲಗ ಸಿನಿಮಾವನ್ನು ಹ್ಯಾಟ್ರಿಕ್ ಹೀರೋ ಶಿವಣ್ಣ ಚಿತ್ರತಂಡದೊಂದಿಗೆ ವೀಕ್ಷಿಸಲಿದ್ದಾರೆ. ಈ ಮೂಲಕ ಸಿನಿಮಾ ತಂಡಕ್ಕೆ ಪ್ರೋತ್ಸಾಹ ಕೊಡಲಿದ್ದಾರೆ.

ಹೌದು, ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ‘ಸಲಗ’ ಸಿನಿಮಾಗೆ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ಸಿಕ್ಕಿದೆ.

ಈ ಹಿಂದೆ ಸಲಗ ಪ್ರಿ ರಿಲೀಸ್ ಕಾರ್ಯಕ್ರಮಕ್ಕೂಶಿವಣ್ಣ ಚಿತ್ರತಂಡಕ್ಕೆ ಶುಭ ಕೋರಿದ್ದರು. ಸಲಗ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಜೊತೆ ಸ್ನೇಹ ಸಂಬಂಧ ಹೊಂದಿರುವ ಶಿವಣ್ಣ ಸಿನಿಮಾ ವೀಕ್ಷಿಸಲಿದ್ದಾರೆ.