ಜುಲೈ 12ರಂದು ಶಿವಣ್ಣ ಬರ್ತ್ ಡೇ: ಭಜರಂಗಿ 2 ಟೀಸರ್ ರಿಲೀಸ್

ಬೆಂಗಳೂರು, ಜುಲೈ 10, 2021 (www.justkannada.in): ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಕಾದಿದೆ !

ಹೌದು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಬರ್ತ್ ಡೇಗೆ ಭಜರಂಗಿ 2 ಟೀಸರ್ ಬಿಡುಗಡೆಯಾಗಲಿದೆ.

ಚಿತ್ರತಂಡದಿಂದ ಈ ಮಾಹಿತಿ ಸಿಕ್ಕಿದೆ. ಅಂದಹಾಗೆ ಕೊರೋನಾ ಕಾರಣದಿಂದ ಶಿವಣ್ಣ ಈ ಬಾರಿ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಈ ಮೊದಲೇ ಹೇಳಿದ್ದರು.

ಹರ್ಷ ನಿರ್ದೇಶನದ ಭಜರಂಗಿ 2 ಟೀಸರ್ ಜುಲೈ 12 ರಂದು ಲಾಂಚ್ ಆಗಿ ಅಭಿಮಾನಿಗಳಿಗೆ ಖುಷಿ ಕೊಡಲಿದೆ.