ಶಿವಣ್ಣನ ಭಜರಂಗಿ-2 ರಿಲೀಸ್ ಡೇಟ್ ಪೋಸ್ಟ್’ಪೋನ್ಡ್ !

ಬೆಂಗಳೂರು, ಫೆಬ್ರವರಿ 6, 2019 (www.justkannada.in): ಜನವರಿ ಅಂತ್ಯದೊಳಗೆ ಬಿಡುಗಡೆ ಆಗಬೇಕಿದ್ದ ಭಜರಂಗಿ 2 ಸಿನಿಮಾದ ರಿಲೀಸ್ ಡೇಟ್ ಮುಂದೂಡಲಾಗಿದೆ.

ಈ ವಿಷಯವನ್ನು ಸ್ವತಃ ನಿರ್ದೇಶಕ ಹರ್ಷ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಚಿತ್ರದ ಪೋಸ್ಟರ್ ಗಳು ಸಾಕಷ್ಟು ಸುದ್ದಿ ಮಾಡಿದ್ದವು.

ಜನವರಿ 16 ರಂದು ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕಲಾಗಿದ್ದ ಗುಹೆ ಸೆಟ್ ‌ ನಲ್ಲಿ , ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಂತೆ ಎಲ್ಲಾ ಸುಸೂತ್ರವಾಗೇ ಶೂಟಿಂಗ್ ನಡಿಯುತ್ತಿತ್ತು.

ಈಗಾಗ್ಲೇ ಚಿತ್ರದ ಚಿತ್ರೀಕರಣ ಶೇ .80 ರಷ್ಟು ಮುಗಿದಿದ್ದು ಉಳಿದ ಶೂಟಿಂಗ್ ಕೂಡ ಆದಷ್ಟು ಬೇಗ ಮುಗಿಯಲಿದೆಯಂತೆ . ಕನ್ನಡ ಸೇರಿದಂತೆ ತೆಲುಗು , ಮಲಯಾಳಂ , ತಮಿಳು , ಹಿಂದಿ ಭಾಷೆಯಲ್ಲಿ ಭಜರಿಂಗಿ -2 ಚಿತ್ರ ನಿರ್ಮಾಣವಾಗುತ್ತಿದೆ .