ವಾರಣಾಸಿ ಜ್ಞಾನವಾಪಿ ಮಸೀದಿಯಲ್ಲಿ ಸರ್ವೆ ವೇಳೆ ಶಿವಲಿಂಗ ಪತ್ತೆ:  ಸ್ಥಳ ಸೀಲ್ ಡೌನ್ ಮಾಡುವಂತೆ ಕೋರ್ಟ್ ಆದೇಶ

Promotion

ವಾರಣಾಸಿ,ಮೇ,16,2022(www.justkannada.in):   ವಾರಣಾಸಿ ಕಾಶಿ ವಿಶ್ವನಾಥ ಮಂದಿರದ ಸಮೀಪವಿರುವ ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಳೆದ 3 ದಿನಗಳಿಂದ ನಡೆದ  ಸರ್ವೆ ಮುಕ್ತಾಯಗೊಂಡಿದ್ದು  ಸರ್ವೆ ವೇಳೆ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗಿದೆ.

ನ್ಯಾಯಾಲಯ ನೇಮಕ ಮಾಡಿರುವ ಸಮಿತಿ ಮೇಲ್ವಿಚಾರಣೆಯಲ್ಲಿ ಈ ಸಮೀಕ್ಷೆ ನಡೆದಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿತ್ತು. ಸರ್ವೆ ವೇಳೆ  ಶಿವಲಿಂಗ ಪತ್ತೆಯಾದ ಸ್ಥಳ ಶೀಲ್ ಡೌನ್ ಮಾಡಲು ವಾರಣಾಸಿ ಕೋರ್ಟ್ ಆದೇಶಿಸಿದೆ.  ಶಿವಲಿಂಗ ಇರುವ ಜಾಗಕ್ಕೆ ಯಾರನ್ನೂ ಬಿಡಬೇಡಿ. ಶಿವಲಿಂಗಕ್ಕೆ ಹಾನಿಯಾಗದಂತೆ ಕ್ರಮ ಕೈಗೊಳ್ಳಿ  ಎಂದು ಕೋರ್ಟ್ ಸೂಚನೆ ನೀಡಿದೆ ಎನ್ನಲಾಗಿದೆ.

ಮಸೀದಿ ಬಳಿ ಭದ್ರತೆಗಾಗಿ ಸಿಆರ್ ಪಿಎಫ್ ನಿಯೋಜನೆ ಮಾಡಲಾಗಿದೆ. ಮಸೀದಿಯಲ್ಲಿ 20 ಮಂದಿಗಷ್ಟೆ ನಮಾಜ್ ಮಾಡಲು ಅವಕಾಶ ನೀಡುವಂತೆ ವಾರಣಾಸಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

Key words: Shivalinga-detected -surveys -Varanasi -Jnanavapi Mosque