ಶಿರಾ ಮತ್ತು ಆರ್ . ಆರ್ ನಗರ ಉಪಚುನಾವಣಾ ಮತದಾನ ಅಂತ್ಯ: ಆದ ವೋಟಿಂಗ್ ಪ್ರಮಾಣವೆಷ್ಟು ಗೊತ್ತೆ…?

ಬೆಂಗಳೂರು,ನವೆಂಬರ್,3,2020(www.justkannada.in):  ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಉಪಚುನಾವಣೆಯ ಮತದಾನ ಮುಕ್ತಾಯವಾಗಿದೆ.jk-logo-justkannada-logo

ಎರಡು ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು ಸರತಿ ಸಾಲಿನಲ್ಲಿ ನಿಂತವರಿಗೆ ಅವಕಾಶ ನೀಡಲಾಗಿದೆ.  ಸಂಜೆ 5 ಗಂಟೆಯವರೆಗೆ ನಡೆದ ಮತದಾನದಲ್ಲಿ ಶಿರಾ ಕ್ಷೇತ್ರದಲ್ಲಿ ಶೇ.77.34 ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಶೇ.39.15ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.Shira -R.R nagar- by-election –voting-end

 ಇತ್ತ ರಾಜ್ಯ ರಾಜಧಾನಿಯ ರಾಜರಾಜೇಶ್ವರಿನಗರ ವಿಧಾನಸಭಾ ಉಪ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದ್ದು, ಮತದಾರರು ಮತ ಚಲಾವಣೆ ಮಾಡಲು ನಿರುತ್ಸಾಹ ತೋರಿದ್ದಾರೆ ಎನ್ನಲಾಗಿದೆ.

Key words: Shira -R.R nagar- by-election –voting-end