ಬಾಲಿವುಡ್’ನಲ್ಲಿ ಶೈನ್ ಆಗಲು ಹೊರಟ ಶೆಟ್ರು !

ಬೆಂಗಳೂರು, ಫೆ04, 2021 (www.justkannada.in): ಕನ್ನಡ ಬಿಗ್ ಬಾಸ್ ಸೀಸನ್-7ರ ವಿನ್ನರ್ ಶೈನ್ ಶೆಟ್ಟಿ ಬಾಲಿವುಡ್ ನತ್ತ ಕಾಲಿಡುತ್ತಿದ್ದಾರೆ.

ಗಾಂಧಿನಗರದಿಂದ ಡೈರೆಕ್ಟ್ ಆಗಿ ಬಾಲಿವುಡ್’ನಲ್ಲಿ ಮಿಂಚಲು ಶೈನ್ ಶೆಟ್ಟಿ ಸಿದ್ಧತೆ ನಡೆಸಿದ್ದಾರೆ. ಅಂದಹಾಗೆ ಹಿಂದಿ ಆಲ್ಬಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಲಿದ್ದಾರೆ.

ಈ ಹಾಡನ್ನು ಸಂಚಿತ್ ಹೆಗ್ಡೆ ಹಾಡಲಿದ್ದಾರೆ. ಧೂಂಡೇ ಹಾಡಿಗೆ ಯತೀಶ್ ರಾಜ್ ಎಂಬುವವರು ನಿರ್ದೇಶನ ಮಾಡುತ್ತಿದ್ರೆ, ಡ್ಯಾನಿ ಕುರಿಯನ್ ಮತ್ತು ಸುಮಿತ್ ಬಂಗೇರಾ ಮ್ಯೂಸಿಕ್ ನೀಡಿದ್ದಾರೆ.

ಇದು ಫ್ಯಾಂಟಸಿ ಪ್ರಯಾಣದ ಕಥೆಯ ಬ್ಯೂಟಿಫುಲ್ ಟ್ರ್ಯಾಕ್ ಎನ್ನಲಾಗಿದೆ.