ಕುರುಬರ ಎಸ್‌ ಟಿ ಹೋರಾಟ: ರಾಜಕೀಯವನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಬರೋಣ ಎಂದ ಸಚಿವ ಕೆ.ಎಸ್ ಈಶ್ವರಪ್ಪ….

ಮೈಸೂರು,ಡಿಸೆಂಬರ್,29,2020(www.justkannada.in): ಕುರುಬ ಸಮುದಾಯವನ್ನ  ಎಸ್‌ ಟಿಗೆ ಸೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದಲ್ಲಿ ರಾಜಕೀಯ ಬೇಡ.  ಇದರಲ್ಲಿ ಸ್ವಾಮೀಜಿ ಇದ್ದಾರೆ. ಇದನ್ನು ದೇವಸ್ಥಾನ ಅಂತ ಭಾವಿಸೋಣ.  ನಮ್ಮ ರಾಜಕಾರಣವನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಬರೋಣ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ  ಹೇಳಿದರು.shepherds-Adding-ST-Fight-Beginning-Siddaramai-house-hosadurga-Shree Ishwaranandpuri Swamiji 

ಮಂಗಳವಾರ  ಮೈಸೂರಿನ  ಕನಕ ಸಮುದಾಯ ಭವನದಲ್ಲಿ ನಡೆದ ಕುರುಬರ ಎಸ್ ಟಿ ಹೋರಾಟ ಸಮಿತಿಯ S T  ಮೀಸಲಾತಿಗಾಗಿ ಮೈಸೂರು ವಿಭಾಗದ ಪೂರ್ವ ಭಾವಿ ಸಭೆಯಲ್ಲಿ  ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿದರು.

ಕುರುಬರಿಗೆ ನ್ಯಾಯ ಸಿಕ್ಕರೆ ಹಿಂದುತ್ವಕ್ಕೆ ನ್ಯಾಯ ಸಿಕ್ಕಿದಂತೆ ಆಗುತ್ತೆ…..

ಕುರುಬರಿಗೆ ನ್ಯಾಯ ಸಿಕ್ಕರೆ ಹಿಂದುತ್ವಕ್ಕೆ ನ್ಯಾಯ ಸಿಕ್ಕಿದಂತೆ ಆಗುತ್ತೆ.  ನಾನು ಜೀವಮಾನ ಪೂರ್ತಿ ಹಿಂದುತ್ವ ಸಿದ್ಧಾಂತ ನಂಬಿದವನು. ಹಿಂದುತ್ವ ಪ್ರತಿಪಾದಿಸಿದವನು ಕುರುಬ ಅಂತ ಹೋದರೆ ತಪ್ಪಾಗುತ್ತದೆ ಅಂತ ಭಾವಿಸಿದ್ದೆ‌. ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗೆ ಸ್ಪೂರ್ತಿ ನೀಡಿದರು. ಕುರುಬರೂ ಸಹ ಹಿಂದೂಗಳು.  ಕುರುಬರಿಗೆ ನ್ಯಾಯ ಸಿಕ್ಕರೆ ಹಿಂದುತ್ವಕ್ಕೆ ನ್ಯಾಯ ಸಿಗುತ್ತೆ ಅಂತ ಹೇಳಿದರು. ಅಂದಿನಿಂದ ಹೋರಾಟದಲ್ಲಿ ಇದ್ದೇನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ನುಡಿದರು.

ಈ ಹೋರಾಟದಲ್ಲಿ ಆರ್‌ ಎಸ್‌ ಎಸ್ ಪಾತ್ರ ಇಲ್ಲ….

ಕುರುಬರನ್ನು ಎಸ್‌ ಟಿಗೆ ಸೇರಿಸುವುದು ನನ್ನ ಕರ್ತವ್ಯ. ನಾನು ಒಬ್ಬ ಮಂತ್ರಿಯಾಗಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ನೀವು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟ ಮಾಡಿ ಅಂತ ಕೆಲವರು ಹೇಳುತ್ತಾರೆ. ಆದರೆ ನಾನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ಕಣ್ಣು ತೆರೆಸುವ ಸಲುವಾಗಿ ಹೋರಾಟದಲ್ಲಿ ಇದ್ದೇನೆ. ಅದಕ್ಕಾಗಿಯೇ ಜಾಥಾ, ಪಾದಯಾತ್ರೆ, ಸಭೆ ಮಾಡುತ್ತಿದ್ದೇವೆ. ಈ ಹೋರಾಟದಲ್ಲಿ ಆರ್‌ ಎಸ್‌ ಎಸ್ ಪಾತ್ರ ಇಲ್ಲ. ಆರ್‌ ಎಸ್‌ ಎಸ್ ಸಮಾಜವನ್ನು ಕೂಡಿಸುತ್ತಿದೆ. ಸಮಾಜವನ್ನು ಹೊಡೆಯುವ‌ ಕೆಲಸ ಮಾಡಲ್ಲ.  ಆರ್‌ ಎಸ್‌ ಎಸ್ ಬಗ್ಗೆ ಏನೂ ಗೊತ್ತಿಲ್ಲದೆ ಮಾತನಾಡಿದರೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದರು.shepherds-Adding-ST-Fight-Beginning-Siddaramai-house-hosadurga-Shree Ishwaranandpuri Swamiji 

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಎ.ಎಚ್.ವಿಶ್ವನಾಥ್,  ಎಚ್.ಎಂ.ರೇವಣ್ಣ, ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ,  ಸಮಿತಿಯ ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ, ಸಮಿತಿ ಖಜಾಂಚಿಗಳಾದ ಕೆ.ಈ. ಕಾಂತೇಶ್, ಸಮಾಜದ ಹಿರಿಯ ಮುಖಂಡರಾದ ಎಸ್.ಪುಟ್ಟಸ್ವಾಮಿ, ಟಿ.ಬಿ.ಬೆಳಗಾವಿ, ಆನೇಕಲ್ ದೊಡ್ಡಯ್ಯ, ಶಿವಕುಮಾರ್, ಅಣ್ಣೇಗೌಡ, ಕೆ.ಬಿ.ಶಾಂತಪ್ಪ, ನವೀನ್ ಕುಮಾರ್, ಬಿ.ಎಂ.ರಘು, ಜೋಗಿ ಮಂಜು ಸೇರಿದಂತೆ ಅನೇಕರು ಭಾಗವಹಿಸಿದ್ದರು.

english summary….

Struggle to include Kurubas under ST category: K.S. Eshwarappa says no to politics
Mysuru, Dec. 29, 2020 (www.justkannada.in): “Please don’t do politics in our struggle to include Kurubas under ST category. A Swamiji is involved in this. We shall consider it as a temple. We will keep politics aside,” opined Rural Development Minister K.S. Eshwarappa.shepherds-Adding-ST-Fight-Beginning-Siddaramai-house-hosadurga-Shree Ishwaranandpuri Swamiji 
Speaking at a programme held in Mysuru today he said that if Kurubas get justice it is like Hinduism getting justice. “I am a person who has believed in the tenets of Hinduism throughout my life. It will be wrong if I speak only about Kurubas. Kurubas are also Hindus,” he added.
“I will fight to include Kurubas under ST category, it is my duty. I have been involved in this struggle being a Minister. Many people ask me to resign from my post and struggle for justice. But I intend to enlighten Prime Minister Narendra Modi and Home Minister Amit Sha. That is why I am participating in and conducting jathas and padayatras. There is no role of RSS in this. RSS unites society, it never tries to break society. If anyone speaks about RSS without knowing anything about I won’t reply,” he said.
Keywords: Minister K.S. Eshwarappa/ Kurubas/ ST category

Key words: Shepherd- ST –fight-mysore-mysore-meeting-minister-KS Eshwarappa