ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ನಿಮ್ಮ ಸಲಹೆ ನೀಡಿ-ಕಾರ್ಯಕರ್ತರಿಗೆ ಶಾಸಕ ಎಸ್.ಎ ರಾಮದಾಸ್ ಕರೆ…

kannada t-shirts

ಮೈಸೂರು,ನವೆಂಬರ್,20,2020(www.justkannada.in): ಭಾರತೀಯ ಜನತಾ ಪಾರ್ಟಿ, ಮಂಡಲ ಮಟ್ಟದ ಎರಡು ದಿನಗಳ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮವು ಮೈಸೂರಿನ ವಿವೇಕಾನಂದ ನಗರದ ಶ್ರೀ ನಾಮದೇವ ಭವನದಲ್ಲಿ ನೆರವೇರಿತು.

ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಎಸ್.ಎ ರಾಮದಾಸ್ ಮತ್ತು  ಬಿಜೆಪಿ ಅಧ್ಯಕ್ಷರಾದ ಶ್ರೀ ವತ್ಸ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಸ್.ಎ. ರಾಮದಾಸ್ ಅವರು, ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಪ್ರದರ್ಶನವನ್ನು ಮಾಡಲಾಗಿದ್ದು. ಆ ಸಾಧನೆಗಳ ಬಗ್ಗೆ ನಿಮಗೇನೆನ್ನಿಸುತ್ತದೆ. ಅದರಲ್ಲಿ ಬದಲಾವಣೆ ತರಬೇಕು ಎಂದೆನಿಸಿದರೆ ಅದರ ಬಗ್ಗೆ ಸಲಹೆಗಳನ್ನು ಸಂಕ್ಷೀಪ್ತವಾಗಿ ಬರೆದು ನೀಡಿ ಎಂದು ತಿಳಿಸಿದರು.

ಜನಸಂಘದ ಹಾಗೂ ಭಾರತೀಯ ಜನತಾ ಪಾರ್ಟಿಯ ಹಿಂಧಿನ ಅಧ್ಯಕ್ಷರುಗಳ ಭಾವ ಚಿತ್ರಗಳಿದ್ದು ಅವರ ಬಗ್ಗೆ ಮಾಹಿತಿ ಕಲೆ ಹಾಕಲು ನೆರೆದಿದ್ದ ಕಾರ್ಯಕರ್ತರಿಗೆ ಶಾಸಕ ರಾಮದಾಸ್ ತಿಳಿಸಿದರು.

ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ವತ್ಸ ರವರು ಮಾತನಾಡಿ, ಅಭ್ಯಾಸವರ್ಗಗಳು ಈ ಹಿಂದೆ 7 ದಿನಗಳ ಕಾಲ ನಡೆಯುತ್ತಿತ್ತು ಈಗ 2 ದಿನಕ್ಕೆ ಬಂದು ನಿಂತಿದೆ. ಬೇರೆ ಯಾವ ಪಕ್ಷದಲ್ಲಿ ಅಭ್ಯಾಸ ವರ್ಗಗಳು ಇಷ್ಟು ಅಚ್ಚುಕಟ್ಟಾಗಿ ನಡೆಯಲು ಸಾಧ್ಯವಿಲ್ಲ, ಬಿಜೆಪಿಯಲ್ಲಿ ಮಾತ್ರ ಇವೆಲ್ಲಾ ಸಾಧ್ಯ. ಎಲ್ಲಾ ಶಿಕ್ಷಾರ್ಥಿಗಳೂ ಸಹ ಆಸಕ್ತಿಯಿಂದ ಭಾಗವಹಿಸಿ ಎಂದು ಕರೆ ಕೊಟ್ಟರು.

ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಶಾಸಕ ಎಸ್.ಎ. ರಾಮದಾಸ್. ಬಿಜೆಪಿ ಬೆಂಗಳೂರು ವಿಭಾಗ ಪ್ರಭಾರಿಗಳಾದ ಗೋಪಿನಾಥ್ ರೆಡ್ಡಿ,  ಬಿಜೆಪಿ ಮೈಸೂರು ನಗರದ ಅಧ್ಯಕ್ಷರಾದ ಶ್ರೀವತ್ಸ, ರಾಜ್ಯ ಬಿಜೆಪಿ ಒ.ಬಿ.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ನಗರ ಪ್ರಧಾನ ಕಾರ್ಯದರ್ಶಿಗಳಾದ ವಾಣಿಶ್, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷರಾದ ವಡಿವೇಲು.ಎಂ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ಘಾಟನೆ ಬೆಂಗಳೂರು ವಿಭಾಗ ಪ್ರಭಾರಿಗಳಾದ ಗೋಪಿನಾಥ್ ರೆಡ್ಡಿ ಮೊದಲನೆಯ ಅವಧಿಯಲ್ಲಿ,  2014 ಸರ್ಕಾರದ ನಂತರ ಬದಲಾದ ಭಾರತದ ರಾಜಕಾರಣ, ಭಾಜಪ ಮತ್ತು ನಮ್ಮ ಜವಬ್ದಾರಿ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.

ಇದರಲ್ಲಿ ಪ್ರಮುಖವಾಗಿ 370ನೇ ವಿಧಿಯ ಬಗ್ಗೆ ಆಧಾರ್ ಜಿ.ಎಸ್.ಟಿ ಯಶಸ್ವಿ ಜೋಡಣೆ, ಜನ್ ದನ್ ಯೋಜನೆ, ದೇಶದ ಸಂವಿಧಾನ ದೇಶದ ಕಾನೂನು, ಭ್ರಷ್ಟಾಚಾರ ರಹಿತ ವಿಶ್ವಸಾರ್ಹ ನಾಯಕತ್ವ, ಬಗ್ಗೆ ಮಾಹಿತಿ ತಿಳಿಸಿದರು. 2 ನೇ ಅವದಿಯನ್ನು ಮಾಜಿ ನಗರ ಪಾಲಿಕ ಸದಸ್ಯರಾದ ಎಂ.ಜಿ.ಮಹೇಶ್ ರವರು ನಮ್ಮ ವಿಚಾರಧಾರೆಯೇ ಇಂದಿನ ಭಾರತದ ಮುಖ್ಯ ವಿಚಾರಧಾರೆ ಎಂಬ ವಿಷಯವನ್ನು ಮಂಡಿಸಿದರು.

ಪ್ರಮುಖವಾಗಿ  ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಬದ್ಧತೆ, ಪ್ರಜಾಪ್ರಭುತ್ವಕ್ಕೆ ಬದ್ಧತೆ ಗಾಂಧಿವಾದಿ ಸಮಾಜವಾದಕ್ಕೆ ಬದ್ಧತೆ ಸಕಾರಾತ್ಮಕ ಜಾತ್ಯತೀತತೆಗೆ ಬದ್ಧತೆ (ಸರ್ವ ಧರ್ಮ ಸಂಭವ), ಮೌಲ್ಯ ಆಧಾರಿತ ರಾಜಕೀಯಕ್ಕೆ ಬದ್ಧತೆ ವಿಚಾರಗಳ ಬಗ್ಗೆ ತಿಳಿಸಿದರು. Share- your -advice - achievements - central government - state government-MLA Ramdas

3ನೇ ಅವದಿಯನ್ನು ಮೈಸೂರಿನ ನಗರ ಪ್ರಭಾರಿಗಳಾದ ಹೀರೇಂದ್ರ ಶಾ  ಹಿಂದಿ6  ವರ್ಷಗಳಲ್ಲಿ ನಡೆದ ಅಂತ್ಯೋದಯದ ಪ್ರಯತ್ನಗಳು ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ಇದರಲ್ಲಿ ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ್, ಪ್ರಧಾನ್ ಮಂತ್ರಿ ಜನ್ ದನ್ ಯೋಜನೆ, ಆಯುಷ್ಮಾನ್ ಭಾರತ್  ಯೋಜನೆ, ಜಲ್ ಜೀವನ್ ಮಿಷಿನ್, ಅಟಲ್ ಪಿಂಚಣಿ ಯೋಜನೆ, ಒಂಡಿತ್ ದೀನ್ ದಯಾಳ್ ಗ್ರಾಮಜ್ಯೋತಿ ಯೋಜನೆ, ಜನೌಷಧಿ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಒದಗಿಸಿದರು.

Key words: Share- your -advice – achievements – central government – state government-MLA Ramdas

website developers in mysore