ವಿಧಾನ ಪರಿಷತ್ ಗೆ ಶಾಂತರಾಮ್ ಸಿದ್ಧಿ ಅವರ ನಾಮನಿರ್ದೇಶನ: ಸಿಎಂ ಬಿಎಸ್ ವೈಗೆ ಅಭಿನಂದನೆ ಸಲ್ಲಿಸಿದ ಮೈಸೂರು ಹಿರಿಯ ವಕೀಲ ಅ.ಮ. ಭಾಸ್ಕರ್

ಮೈಸೂರು,ಜು,23,2020(www.justkannada.in):  ವಿಧಾನಪರಿಷತ್ ಗೆ ಸಿದ್ಧಿ ಜನಾಂಗದ ಶಾಂತಾರಾಮ್ ಸಿದ್ದಿ ಅವರನ್ನು ಸದಸ್ಯರನ್ನಾಗಿ ನಾಮಕರಣ ಮಾಡಿದ ಹಿನ್ನೆಲೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮೈಸೂರಿನ ಹಿರಿಯ ವಕೀಲ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಶೋಧನೆ ಹಾಗೂ ಅಧ್ಯಯನ ಸಂಸ್ಥೆ ಅಧ್ಯಕ್ಷ ಅ.ಮ. ಭಾಸ್ಕರ್ ಅಭಿನಂದನೆ ಸಲ್ಲಿಸಿದ್ದಾರೆ.jk-logo-justkannada-logo

ಶಾಂತಿರಾಮ್ ಸಿದ್ಧಿ ಅವರನ್ನ ವಿಧಾನಪರಿಷತ್ ಗೆ  ನಾಮನಿರ್ದೇಶನ ಮಾಡಿರುವುದಕ್ಕೆ ಸಿಎಂ ಬಿಎಸ್ ವೈಗೆ ಅಭಿನಂದನೆ ಸಲ್ಲಿಸಿರುವ ಹಿರಿಯ ವಕೀಲ ಅ.ಮ ಭಾಸ್ಕರ್, ‘ನಿನ್ನೆಯ ದಿನ ಕರ್ನಾಟಕ  ರಾಜ್ಯ  ವಿಧಾನಪರಿಷತ್ತಿಗೆ  ಗೌರವಾನ್ವಿತ ರಾಜ್ಯಪಾಲರು ಸಿದ್ಧಿ ಜನಾಂಗದ ಶಾಂತಾರಾಮ್ ಸಿದ್ದಿ ಅವರನ್ನು ಸದಸ್ಯರನ್ನಾಗಿ ನಾಮಕರಣ ಮಾಡಿರುವುದು  ಒಂದು ಐತಿಹಾಸಿಕ ಬೆಳವಣಿಗೆ. ಕಳೆದ  ಹಲವಾರು ವರ್ಷಗಳಿಂದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ವನವಾಸಿ ಕಲ್ಯಾಣ ಯೋಜನೆಯ  ಸ್ವಯಂಸೇವಕರಾಗಿ ವನವಾಸಿ ಗಳ ಹಾಗೂ ಅವರ ಸಾಂವಿಧಾನಿಕ ಹಕ್ಕುಗಳಿಗಾಗಿ ಅವಿರತವಾಗಿ ಹೋರಾಟ ಮಾಡಿಕೊಂಡು ಬಂದಿರುವ ಶಾಂತಾರಾಮ್ ಸಿದ್ಧಿ ಅವರನ್ನು ಕರ್ನಾಟಕ ರಾಜ್ಯ ವಿಧಾನಪರಿಷತ್ತಿಗೆ ಮುಖ್ಯಮಂತ್ರಿಗಳು  ಆಯ್ಕೆ ಮಾಡಿರುವುದು ಗಿರಿಜನರ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ  ಮಾನವ ಹಕ್ಕುಗಳ ಹೋರಾಟಗಾರರಿಗೆ ಹಾಗೂ  ಕಾರ್ಯಕರ್ತರಿಗೆ ಸಂದ ಗೌರವವಾಗಿದೆ.shantaram-siddhi-nomination-legislative-council-mysore-advocate-ama-bhaskar-cm-bs-yeddyurappa

ಶಾಂತರಾಮ್ ಸಿದ್ಧಿ ಅವರನ್ನ ಆಯ್ಕೆಯನ್ನು ಮಾಡಿರುವುದು ಮಾನವ ಹಕ್ಕುಗಳ ಕುರಿತು  ಹೋರಾಟ ಮಾಡುತ್ತಿರುವ ಸಂಘಟನೆಗಳು ಹಾಗೂ ಕಾರ್ಯಕರ್ತರುಗಳಿಗೆ  ಇನ್ನು ಹೆಚ್ಚಿನ  ಹೋರಾಟ ಮಾಡಲು ಬಲ ಬಂದಂತಾಗಿದೆ .ಹಾಗೂ ಸದನದಲ್ಲಿ ಗಿರಿಜನರ  ಸಾಂವಿಧಾನಿಕ ಹಕ್ಕುಗಳ ಕುರಿತು ಇನ್ನು ಪ್ರಬಲವಾಗಿ ಹೋರಾಟ ಮಾಡಲು ಹಾಗೂ ಗಿರಿಜನರ ಹಾಗೂ ವನವಾಸಿಗಳ ಘನತೆಯನ್ನು ಕಾಪಾಡಲು ಈ ಆಯ್ಕೆ  ಸೂಕ್ತವಾಗಿದೆ. ಶಾಂತಾರಾಮ್ ಸಿದ್ದಿ ಅವರ ಆಯ್ಕೆಯನ್ನು ಮಾಡಿದ  ಸಿಎಂ ಬಿಎಸ್ ಯಡಿಯೂರಪ್ಪ  ಅಭಿನಂದನೆ ಸಲ್ಲಿಸುವುದಾಗಿ ಅ.ಮ ಭಾಸ್ಕರ್ ತಿಳಿಸಿದ್ದಾರೆ.

Key words: Shantaram Siddhi- nomination – legislative- council-Mysore -Advocate,- ama Bhaskar-CM BS yeddyurappa