ಪ್ರಾಂಶುಪಾಲರೊಬ್ಬರಿಗೆ ಪ್ರತಿಷ್ಠಿತ ಕ್ಲಬ್ ಉಪಾಧ್ಯಕ್ಷರಿಂದ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

ಬೆಂಗಳೂರು,ಫೆಬ್ರವರಿ,19,2021(www.justkannada.in):   ಪ್ರತಿಷ್ಠಿತ ಕ್ಲಬ್ ಉಪಾಧ್ಯಕ್ಷರೊಬ್ಬರು ಮಹಿಳಾ ಪ್ರಾಂಶುಪಾಲರೊಬ್ಬರಿಗೆ ಲೈಂಗಿಕ ಕಿರುಕುಳ ನೀಡುರುವ ಆರೋಪ ಕೇಳಿ ಬಂದಿದೆ.jk

ಬೆಂಗಳೂರಿನ ಬಸನವನಗುಡಿಯ ಯುನಿಯನ್ ಕ್ಲಬ್ ಉಪಾಧ್ಯಕ್ಷ ಮೋಹನ್ ರಾವ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಮಹಿಳಾ ಪ್ರಾಂಶುಪಾಲರೊಬ್ಬರು ಫೆಬ್ರವರಿ 6 ರಂದು  ಯುನಿಯನ್ ಕ್ಲಬ್ ಗೆ ಹೋಗಿದ್ದ ವೇಳೆ ಮೋಹನ್ ರಾವ್ ಕಿರುಕುಳ ನೀಡಿದ್ದಾರೆ  ಎಂಬ ಆರೋಪ ಕೇಳಿ ಬಂದಿದೆ.

Sexual harassment -  club -vice president - principal.
ಕೃಪೆ-internet

ಮಹಿಳೆ ಕ್ಲಬ್ ಗೆ ಹೋಗಿದ್ದಾಗ ಶೌಚಾಲಯಕ್ಕೆಂದು ತೆರಳುತ್ತಿದ್ದ ವೇಳೆ ಅವರನ್ನು ತಡೆದಿದ್ದ ಮೋಹನ್ ರಾವ್, ಅಸಭ್ಯವಾಗಿ ವರ್ತಿಸಿದ್ದು,  ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಾಂಶುಪಾಲರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೋಹನ್ ರಾವ್ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Key words: Sexual harassment –  club -vice president – principal.