ಸಂವಿಧಾನಕ್ಕಿಂತ ದೊಡ್ಡವರು ಯಾರು ಇಲ್ಲ: ಈ ನೆಲದ ಕಾನೂನಿಗೆ ನಾವು ತಲೆಬಾಗಬೇಕಿದೆ-ಜ್ಞಾನ ಪ್ರಕಾಶ ಸ್ವಾಮೀಜಿ.

ಮೈಸೂರು, ಸೆಪ್ಟೆಂಬರ್,1,2022(www.justkannada.in): ಕರ್ನಾಟಕದ ಇತಿಹಾಸದಲ್ಲಿ ಮಠ ಪೀಠಗಳ ಪರಂಪರೆಗೆ ಬಹಳ ಗೌರವವಿದೆ , ಇತ್ತೀಚೆಗೆ ಮುರುಘಾ ಶ್ರೀಗಳ ವಿರುದ್ಧ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಅವರ ಮೇಲಿರುವ ಫೋಕ್ಸೋ ಕಾಯಿದೆ ಈಗಾಗಲೇ ನ್ಯಾಯಾಲಯದ ಹಂತದಲ್ಲಿದ್ದು , ನಮ್ಮ ಸಂವಿಧಾನಕ್ಕಿಂತ ದೊಡ್ಡ ಸ್ವಾಮೀಜಿಗಳು ಯಾರು ಇಲ್ಲ.  ಈ ನೆಲದ ಕಾನೂನಿಗೆ ನಾವು ತಲೆಬಾಗಬೇಕಿದೆ ಎಂದು ಉರಿಲಿಂಗ ಪೆದ್ದಿಮಠದ ಶ್ರೀಗಳಾದ ಜ್ಞಾನ ಪ್ರಕಾಶ್ ಸ್ವಾಮೀಗಳು ತಿಳಿಸಿದರು.

ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಡಿನ ಎಲ್ಲಾ ಚಿಂತಕರು ಹಾಗೂ ಹೋರಾಟಗಾರರು ನೊಂದ ಜನರ ಸಂತ್ರಸ್ತೆಯರ ಕಣ್ಣೀರಿಗೆ ನ್ಯಾಯ ದೊರಕಿಸಬೇಕು. ಫೋಕ್ಸೋ ಸರಳ ಕಾಯಿದೆಯಲ್ಲ, ಇದು ಬಲು ಬಲಿಷ್ಠ ಕಾಯಿದೆಯಾಗಿದೆ . ಹಾಗಾಗಿ ಇದು ನಮ್ಮ ನಾಡಿನ ಹೆಣ್ಣು ಮಕ್ಕಳ ರಕ್ಷಾ ಕವಚ ಕಾಯ್ದೆ. ಸುಖಾ ಸುಮ್ಮನ ಈ ಕಾಯ್ದೆ ಬಳಸುವಂತಿಲ್ಲ.

ಈ ಕಾಯಿದೆ ಅಷ್ಟು ಸರಳವು ಅಲ್ಲ ಹಾಗಾಗಿ ಕರ್ನಾಟಕದ ಬಹು ದೊಡ್ಡ ಪರಂಪರೆಯೆ ಇರುವ ಮಠದ ಮುರುಘಾ ಶ್ರೀಗಳ ವಿರುದ್ಧ ಇರುವ ಆರೋಪ ಅದೇನೇ ಏನೇ ಇರಲಿ .ಕೂಡಲೇ ಸತ್ಯಾಸತ್ಯತೆ ಜನರಿಗೆ ತಿಳಿಯ ಬೇಕಾಗಿದೆ . ಕೂಡಲೇ ಸರ್ಕಾರ ಮತ್ತು ನ್ಯಾಯಾಂಗ ಇಲಾಖೆ ತಕ್ಷಣ ಜಾಗೃತರಾಗಿ ನೊಂದವರ ಪರವಾಗಿ ಈ ನೆಲದ ಸತ್ಯದ ಅರಿವನ್ನು ತಿಳಿಸುವ ಕೆಲಸಮಾಡಬೇಕು. ಇಲ್ಲದಿದ್ದರೆ ನಾವು ನಾಡಿನಾದ್ಯಂತ ಜಾಗೃತಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು

ಸುದ್ದಿಗೋಷ್ಟಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ನರಸಿಂಹ ಮೂರ್ತಿ , ತುಂಬಲ ರಾಮಣ್ಣ, ದ್ಯಾವಪ್ಪ ನಾಯಕ, ಸೋಮಯ್ಯ ಮಲೆಯೂರು, ಪ್ರಭಕರ್ ಹುಣಸೂರು ಉಪಸ್ಥಿತರಿದ್ದರು .

Key words: sexual Harassment-against- Muruga shri-mysore-jnana prakash swamiji