ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ.

ಚಿತ್ರದುರ್ಗ,ಸೆಪ್ಟಂಬರ್,1,2022(www.justkannada.in):   ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನ ಕೋರ್ಟ್ ಮುಂದೂಡಿದೆ.

ಮುರುಘಾ  ಶ್ರೀಗಳ ವಿರುದ್ಧ ಇಬ್ಬರು ವಿದ್ಯಾರ್ಥಿನೀಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಫೋಕ್ಸೋ ಕಾಯ್ದೆಯಡಿ ಮುರುಘಾ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ  ನಿರೀಕ್ಷಣಾ ಜಾಮೀನು ಕೋರಿ ಮುರುಘಾ ಶ್ರೀಗಳು ಚಿತ್ರದುರ್ಗ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ  ಅರ್ಜಿ ವಿಚಾರಣೆಯನ್ನ ಕೋರ್ಟ್  ನಾಳೆಗೆ  ಮುಂದೂಡಿಕೆ ಮಾಡಿದ್ದು ನಾಳೆ ಶ್ರೀಗಳಿಗೆ ಜಾಮೀನು ಸಿಗುತ್ತದೆಯೇ ಇಲ್ಲವೇ ನಾಳೆ ನಿರ್ಧಾರವಾಗಲಿದೆ.

Key words: sexual Harassment- against- Mr. Muragha shri- Adjournment – bail application.

ENGLISH SUMMARY…

Sexual harassment case against Murughashri: Anticipatory bail application inquiry postponed
Chitradurga, September 1, 2022 (www.justkannada.in): The Hon’ble Court today postponed the inquiry of the anticipatory bail application with respect to the sexual exploitation case against Shivarmurthy Swamiji of the Murughamath, Chitradurga.
Two girl students of the school run by the Murugha Math in Chitradurga have alleged sexual exploitation by the Swamiji, following which a case was registered against the Swamiji under POCSO Act. The advocate representing the Swamiji had appealed for anticipatory bail at the 1st Additional Court, in Chitradurga.
The Court has postponed the inquiry of the appeal to tomorrow. We will come to know whether the Swamiji will get the bail or won’t, by tomorrow.
Keywords: Murughashri/ sexual exploitation case/ court/ anticipatory bail application/ postponed