ತೆಲಂಗಾಣದಲ್ಲಿ ರಸ್ತೆ ಅಪಘಾತ, ಕರ್ನಾಟಕ 7 ಮಂದಿ ಕಾರ್ಮಿಕರು ಮೃತ.

 

ಹೈದರಾಬಾದ್, ಮಾ.28, 2020 (www.justkannada.in news ): ಶುಕ್ರವಾರ ತಡರಾತ್ರಿ ನಗರದ ಹೊರವಲಯದಲ್ಲಿರುವ ಪೆಡ್ಡಾ ಗೋಲ್ಕೊಂಡಾ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಏಳು ಕಾರ್ಮಿಕರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಪೈಕಿ ಇಬ್ಬರು ಮಕ್ಕಳು.

ಅಪಘಾತ ಸಂಭವಿಸಿದ ವ್ಯಾನ್‌ನಲ್ಲಿದ್ದ 31 ಕಾರ್ಮಿಕರ ಪೈಕಿ ಐವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು. ವ್ಯಾನ್‌ನಲ್ಲಿದ್ದ ಇತರ ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.

 Seven labourers- Karnataka- killed- four injured- road mishap- Telangana

ಕಾರ್ಮಿಕರು ಕರ್ನಾಟಕದ ತಮ್ಮ ಊರಾದ ರಾಯಚೂರಿಗೆ ಹಿಂದಿರುಗುತ್ತಿದ್ದರು ಎನ್ನಲಾಗಿದೆ. ಇವರೆಲ್ಲಾ ಇಲ್ಲಿನ ಸೂರ್ಯಪೇಟೆಯ ರಸ್ತೆ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಆಗಿದ್ದರಿಂದ ರಸ್ತೆ ನಿರ್ಮಾಣ ಯೋಜನೆ ಸಹ ಸ್ಥಗಿತಗೊಂಡಿತ್ತು. ಇದರಿಂದ ಜೀವನ ನಿರ್ವಹಣೆ ದುಸ್ತರವಾಗಿ ಸ್ವಂತ ಊರಿಗೆ ತೆರಳು ಮುಂದಾಗಿದ್ದರು.

ಈ ವೇಳೆ ಗುಜರಾತ್‌ಗೆ ತೆರಳುತ್ತಿದ್ದ ಮಾವು ತುಂಬಿದ ಟ್ರಕ್ ಅತಿಯಾದ ವೇಗದಲ್ಲಿ ಬಂದು ಕಾರ್ಮಿಕರು ತೆರಳುತ್ತಿದ್ದ ವ್ಯಾನ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ಅಪಘಾತ ಸಂಭವಿಸಿ ದುರ್ಘಟನೆ ನಡೆದಿದೆ ಎಂಬುದು ಆರಂಭಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

KEY WORDS :  Seven labourers- Karnataka- killed- four injured- road mishap- Telangana

 

ENGLISH SUMMARY :

7 Karnataka labourers die in road mishap in Telangana

Hyderabad: Seven labourers from Karnataka were killed and four injured when the van in which they were travelling was hit by a truck near Pedda Golconda on the outskirts of the city late on Friday night, police said.The deceased included two children
Of the 31 workers in the van, five died on the spot and two while underoing treatment at a hospital, Assistant Commissioner of Traffic Vishwa Prasad said.
Four others were hospitalised and the condition of one of them is critical, he said, adding the other workers in the van escaped with minor injuries.
The workers were on their way back to their home town Raichur in Karnataka as the road project they were working in at Suryapet here was stalled due to the lockdown, Prasad said. He said initital investigations revealed that the mango laden truck, which was on its way to Gujarat,was overspeeding.