ನೀವೇನಾದ್ರೂ ರಾಮನನ್ನ ಗುತ್ತಿಗೆ ತೆಗೆದುಕೊಂಡಿದ್ದೀರಾ..? ವಿಪಕ್ಷ ನಾಯಕ  ಸಿದ್ಧರಾಮಯ್ಯ ಪ್ರಶ್ನೆ…

ಬೆಂಗಳೂರು,ಮಾರ್ಚ್,9,2021(www.justkannada.in):  ವಿಧಾನಸಭೆಯಲ್ಲಿ ಇಂದು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಚರ್ಚೆ ವೇಳೆ ಶ್ರೀ ರಾಮನ ವಿಚಾರ ಪ್ರಸ್ತಾಪವಾಗಿ  ಸಿದ್ಧರಾಮಯ್ಯ ಬಿಜೆಪಿ ಸದಸ್ಯರಿಗೆ ಚಾಟಿ ಬೀಸಿದರು.jk

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ರಾಜ್ಯಸಭೆ ಬಿಜೆಪಿ ಸದಸ್ಯ ಸುಬ್ರಮಣಿಯನ್ ಅವರ ಟ್ವಿಟ್ ಪ್ರಸ್ತಾಪಿಸಿದರು.  ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ 93 ರೂ, ಸೀತೆಯ ನೇಪಾಳದಲ್ಲಿ 53 ರೂ. ರಾವಣನ ಶ್ರೀಲಂಕಾದಲ್ಲಿ 52 ರೂ ಇದೆ ಎಂಬ ಟ್ವೀಟ್ ಪ್ರಸ್ತಾಪಿಸಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಈ ಸಮಯದಲ್ಲಿ ಕಾಂಗ್ರೆಸ್ ಸದಸ್ಯರ ಕಾಲೆಳೆದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಿಮ್ಮ ಬಾಯಲ್ಲಿ ಶ್ರೀರಾಮನ ಹೆಸರು ಕೇಳಲು ಚಂದ ಎಂದರು.

ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ,ನೀವೇನು ಶ್ರೀರಾಮನನ್ನ ಗುತ್ತಿಗೆ ತೆಗೆದುಕೊಂಡಿದ್ದೀರಾ..? ನನ್ನ ಹೆಸರಿನಲ್ಲಿ ರಾಮನಿದ್ದಾನೆ ಎಂದರು. ಇದೇ ವೇಳೆ ಸ್ಪೀಕರ್ ಕಾಗೇರಿ ಮಧ್ಯಪ್ರವೇಶಿಸಿ, ರಾಮಮಂದಿರ ನಿರ್ಮಾಣಕ್ಕೆ ಹಣ ನೀಡಿದ್ದೀರಾ ಎಂದು ಪ್ರಶ್ನಿಸಿದರು.

session-rama- discussion- former cm-siddaramaiah
ಕೃಪೆ-internet

ಇದಕ್ಕೆ ಉತ್ತರಿಸಿದ ಸಿದ್ಧರಾಮಯ್ಯ ನಾನು ನಮ್ಮ ಊರಿನ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇನೆ. ಅಯೋಧ್ಯೆಗೆ ನೀಡಿಲ್ಲ. ರಾಮನಿಗೆ ದೇಣಿಗೆ ಎಲ್ಲಿ ಕೊಟ್ಟರೇನು ಎಲ್ಲವೂ ಒಂದೇ ಎಂದರು. ಈ ಮಾತನ್ನ ಕೇಳಿದ ಸ್ಪೀಕರ್ ಅದು ಸರಿ ಎಂದು ಹೇಳಿದರು.

Key words: session-rama- discussion- former cm-siddaramaiah