ರಾಜ್ಯದಲ್ಲಿ ಅನಧಿಕೃತ ದೇವಾಲಯಗಳ ಅಧಿಕೃತ ಗೊಳಿಸಲು ಹೊಸ ಬಿಲ್ ಮಂಡನೆ- ಶಾಸಕ ಎಸ್.ಎ ರಾಮದಾಸ್.

kannada t-shirts

ಮೈಸೂರು,ಸೆಪ್ಟಂಬರ್,18,2021(www.justkannada.in):   ರಾಜ್ಯದಲ್ಲಿ  ದೇವಾಲಯಗಳ ತೆರವು ವಿಚಾರ ಸಾಕಷ್ಟು ಸದ್ಧು ಮಾಡುತ್ತಿದ್ದು ಈ ಮಧ್ಯೆ ರಾಜ್ಯದಲ್ಲಿ ಅನಧಿಕೃತ ದೇವಾಲಯಗಳ ಅಧಿಕೃತ ಗೊಳಿಸಲು ಹೊಸ ಬಿಲ್ ಮಂಡನೆ ಮಾಡಲಾಗುತ್ತಿದೆ.

ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಎಸ್. ಎ.ರಾಮದಾಸ್ ರ ಖಾಸಗಿ ಬಿಲ್ ಮಂಡಿಸಲಿದ್ದಾರೆ. ರಾಜ್ಯದಲ್ಲಿನ 2814  ಅನಧಿಕೃತ ದೇವಾಲಯಗಳನ್ನ ಅಧಿಕೃತಗೊಳಿಸಲು ಕ್ರಮ ಈ ಬಿಲ್ ಮಂಡನೆ ಮಾಡಲಾಗುತ್ತಿದೆ. ಅನಧಿಕೃತ ಹಿಂದೂ ದೇವಾಲಯಗಳ ಕ್ರಮಬದ್ಧಗೊಳಿಸುವಿಕೆ ಕಾಯ್ಧೆ 2021 ಬಿಲ್ ಅನ್ನ ಮಂಡಿಸಲಿದ್ದಾರೆ. ಈ ಕಾಯ್ದೆ ಪಾಸ್ ಮಾಡಲು ವಿಪಕ್ಷಗಳ ಬಳಿಯೂ ಶಾಸಕ ಎಸ್.ಎ ರಾಮದಾಸ್ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಎಸ್.ಎ ರಾಮದಾಸ್, ಬಿಲ್ ನಲ್ಲಿ ಭವಿಷ್ಯದಲ್ಲಿ ಅನಧಿಕೃತ ದೇವಸ್ತಾನ ನಿರ್ಮಿಸಿಸದರೆ ಕಾನೂನು ಕ್ರಮಕ್ಕೂ ಅವಕಾಶ ನೀಡಲಾಗುತ್ತದೆ. ಯಾವುದೇ ಅನಧಿಕೃತ ದೇವಾಲಯ ನಿರ್ಮಾಣವಾಗದಂತೆ ತಡೆಯಲು ಕಾಯ್ದೆ ಜಾರಿಗೆ ತರಲಾಗುತ್ತದೆ. ಬೇಕಾದರೆ ಸರ್ಕಾರ ಈ ಖಾಸಗಿ ಬಿಲ್ ಅನ್ನೂ ಸರ್ಕಾರದ ಬಿಲ್ ಆಗಿ ಮಂಡಿಸಲು ಅವಕಾಶ ಮಾಡಿಕೊಡುತ್ತೇನೆ ಎಂದಿದ್ದಾರೆ.

ಮೈಸೂರಿನಲ್ಲಿ ಅನಧಿಕೃತ ವಿಷ್ಣು ಸ್ಮಾರಕ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಸ್.ಎ ರಾಮದಾಸ್, ಕಾನೂನು ಮೀರಿ ಯಾರೂ ಈ ರೀತಿ ಪ್ರತಿಮೆ ಸ್ಥಾಪಿಸಬಾರದು. ವಿಷ್ಣುವರ್ಧನ್ ಯಾವತ್ತೂ ಕಾನೂನು ಮೀರಿದವರಲ್ಲ. ಅವರ ಪ್ರತಿಮೆ ವಿಚಾರ ವಿವಾದ ಆಗುವುದು ಬೇಡ. ಸುಪ್ರೀಂ ಕೋರ್ಟ್ ಹೇಳಿದೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಪ್ರತಿಮೆ ನಿರ್ಮಾಣ ತಪ್ಪು ಎಂದು ಕಾನೂನಾತ್ಮಕವಾಗಿ ಭವಿಷ್ಯದಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದರು.

Key words: session-New bill -unofficial -temples – state- MLA- SA Ramadas.

website developers in mysore