ಮೈಸೂರಿನಲ್ಲಿ ಸೇವಾಯಾನ ಸಂಸ್ಥೆಯಿಂದ ಕೊರೋನಾ ಕುರಿತ ಜಾಗೃತಿ ಕಾರ್ಯಕ್ರಮ

ಮೈಸೂರು,ಅಕ್ಟೋಬರ್,15,2020(www.justkannada.in) : ಪ್ರತಿಯೊಬ್ಬರು ನಾವು ಸೋಂಕಿನ ಪಕ್ಕದಲ್ಲೇ ಇದ್ದೇವೆ ಎಂಬ ಸಣ್ಣ ಎಳೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಅದು ನಮ್ಮೊಳಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯಿದೆ ಎಂದು ಸೇವಾಯಾನ ಸಂಸ್ಥೆಯ ಪ್ರಭಾಮಣಿ  ಹೇಳಿದರು.jk-logo-justkannada-logoನಗರದ ಹೂಟಗಳ್ಳಿಯಲ್ಲಿ ಸೇವಾಯಾನ ಸಂಸ್ಥೆಯು, ಫ್ಯಾಮಿಲಿ ಪ್ಲಾನಿಂಗ್ ಅಸೋಷಿಯೇಷನ್ ಇಂಡಿಯಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ಆಯೋಜಿಸಿದ್ದ ಕೊರೊನಾ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ರೋಗದೊಡನೆ ಭಯ, ಆತಂಕಗಳು ಸೇರಿಕೊಂಡು ಮನುಷ್ಯರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೊರೊನಾ ಕುರಿತು ಸಾಮಾಜಿಕ ಅರಿವು ಮೂಡಿಸುವ  ಸಣ್ಣ ಪ್ರಯತ್ನವಾಗಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರೊಡನೆ, ನಮ್ಮವರನ್ನೂ, ಸಮಾಜವನ್ನೂ, ದೇಶವನ್ನೂ ರಕ್ಷಿಸಿಕೊಳ್ಳಬಹುದು ಎಂದು ತಿಳಿಸಿದರು.service-company-hood-Awareness-Program-Corona

ಫ್ಯಾಮಿಲಿ ಪ್ಲಾನಿಂಗ್ ಅಸೋಷಿಯೇಷನ್‌ ಇಂಡಿಯಾ ಮೈಸೂರು ಶಾಖೆಯ ವ್ಯವಸ್ಥಾಪಕ ಬಿಜಿಮೊಲ ಮಾತನಾಡಿ, ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂದು ಬಯಸಲು ಆಗುವುದಿಲ್ಲ. ಜನಸಾಮಾನ್ಯರಾದ ನಾವುಗಳು ಇಂತಹ ಕಠಿಣ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.

ಪ್ರಾರಂಭದಿಂದಲೂ ನಮ್ಮ ಸಂಸ್ಥೆಗಳು ಬಹಳಷ್ಟು ಸಮುದಾಯಗಳಿಗೆ ತೆರಳಿ ಕೊರೊನಾ ಸಂಬಂಧಿ ಆಯಾ ಕಾಲಕ್ಕೆ ಅಗತ್ಯವಿರುವ ನೆರವನ್ನು ನೀಡುತ್ತಾ, ಜಾಗೃತಿಯನ್ನೂ ಮೂಡಿಸುತ್ತಾ ಬಂದಿದ್ದೇವೆ. ಇನ್ನೇನಿದ್ದರೂ ನಿಮ್ಮ ಕೆಲಸ. ಬದಲಾವಣೆಗಾಗಿ ಎದುರು ನೋಡುವುದನ್ನು ಬಿಟ್ಟು, ನಿಮ್ಮಿಂದಲೇ ಬದಲಾವಣೆಯನ್ನು ಪ್ರಾರಂಭಿಸಿ ಎಂದು ಹೇಳಿದರು.service-company-hood-Awareness-Program-Coronaಕಾರ್ಯಕ್ರಮದಲ್ಲಿ ಕೈ ತೊಳೆಯುವ ವಿಧಾನ, ಮಾಸ್ಕ್ ಬಳಕೆಯ ಮಹತ್ವದ ಬಗ್ಗೆ ಪ್ರಭುಶಂಕರ್‌ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ವಿವರಿಸಿದರು. ಸೇವಾಯಾನ ಸಂಸ್ಥೆಯ ಮಂಜುನಾಥಸ್ವಾಮಿ ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್‌ನ ದೇವಿಕಾ ಮೈಲೋ ಪ್ಯಾಕೆಟ್‌ಗಳನ್ನು ವಿತರಿಸಿದರು‌.

ಕಾರ್ಯಕ್ರಮದಲ್ಲಿ ಸೇವಾಯಾನ ಸಂಸ್ಥೆಯ ಆಶಾ.ಎಂ, ರಂಜಿತ್ ಇತರರು ಹಾಜರಿದ್ದರು.

key words : service-company-hood-Awareness-Program-Corona