22ರಿಂದ ಧಾರವಾಹಿ, ರಿಯಾಲಿಟಿ ಶೋ ಚಿತ್ರೀಕರಣ ಶಟ್’ಡೌನ್

Promotion

ಬೆಂಗಳೂರು, ಮಾರ್ಚ್ 20, 2020 (www.justkannada.in): ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಧಾರವಾಹಿಗಳು ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಒಂದು ವಾರದ ಕಾಲ ಸ್ಥಗಿತಗೊಳಿಸಲು ಆದೇಶಿಸಿದೆ.

ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಈಗಾಗಲೇ ಧಾರವಾಹಿಗಳ ಚಿತ್ರೀಕರಣ ಬಂದ್ ಆಗಬಹುದು ಎಂಬ ಸುದ್ದಿಹಬ್ಬಿತ್ತು. ಆದರೆ ಅಧಿಕೃತ ಆದೇಶ ಬಂದಿರಲಿಲ್ಲ.

ಹಾಗಿದ್ದರೂ ಧಾರವಾಹಿ ತಂಡಗಳು ಹೆಚ್ಚುವರಿ ಎಪಿಸೋಡ್ ಗಳಿಗಾಗಿ ಹಗಲಿರುಳೆನ್ನದೇ ಚಿತ್ರೀಕರಣ ನಡೆಸುತ್ತಿದ್ದವು. ಇದೀಗ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧಿಕೃತವಾಗಿ ನೋಟಿಸ್ ನೋಡಿದೆ.

ಮಾರ್ಚ್ 22 ರಿಂದ 31 ರವರೆಗೆ ಚಿತ್ರೀಕರಣ ಬಂದ್ ಮಾಡಲು ಸೂಚಿಸಿದೆ. ಇದರ ಬಳಿಕ ಪರಿಸ್ಥಿತಿ ನೋಡಿಕೊಂಡು ಚಿತ್ರೀಕರಣ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದೆ.