ದುನಿಯಾ ವಿಜಿ ಚಿತ್ರಕ್ಕೆ ಝೀ ಕನ್ನಡದ ‘ಪಾರು’ ನಾಯಕಿ !

ಬೆಂಗಳೂರು, 17 ನವೆಂಬರ್ 2020: ನಟ ದುನಿಯಾ ವಿಜಯ್ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ಝೀ ಕನ್ನಡದ ಪಾರು ಧಾರವಾಹಿಯ ನಟಿ ಮೋಕ್ಷಿತಾ ಪೈ ಆಯ್ಕೆಯಾಗಿದ್ದಾರೆ.

ಸಲಗ ಸಿನಿಮಾ ನಿರ್ದೇಶಿಸಿರುವ ವಿಜಿ ಶೀಘ್ರದಲ್ಲೇ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದಾಗಿ ಘೋಷಿಸಿ ಚಿತ್ರಕ್ಕೆ ರಾಜ್ ಕುಟುಂಬದ ಲಕ್ಕಿ ಗೋಪಾಲ್​ ನಾಯಕ ಎಂದು ಘೋಷಿಸಿದ್ದರು. ಇದೀಗ ನಾಯಕ ನಟಿಯ ಆಯ್ಕೆಯೂ ಫೈನಲ್ ಆಗಿದೆ.

ವಿಜಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಬಹುತೇಕರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ.

ಪಾರು ಧಾರಾವಾಹಿ ಮೂಲಕ ನಾಡಿನ ಹೆಂಗೆಳೆಯರ ಗಮನ ಸೆಳೆದಿರುವ ಮೋಕ್ಷಿತಾ ಪೈ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ವಾಸುಕಿ ವೈಭವ್ ಮತ್ತು ಚರಣ್​ ರಾಜ್​ ಸಂಗೀತ, ಬಾಲು ಶಿವಮೊಗ್ಗ ಛಾಯಾಗ್ರಹಣ, ಮಾಸ್ತಿ ಮಂಜು ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.