ಹಿರಿಯ ಪತ್ರಿಕಾ ಛಾಯಾಗ್ರಾಹಕ ಅಮರ್ ದಾಸ್ ಡಿ.ಎಚ್. ನಿಧನ

ಮೈಸೂರು,ಸೆಪ್ಟೆಂಬರ್,20,2020(www.justkannada.in) : ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಅಮರ್ ದಾಸ್ ಡಿ ಎಚ್.(83) ಅವರು ಭಾನುವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಮೈಸೂರಿನಲ್ಲಿರುವು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

jk-logo-justkannada-logo

ಬಾಂಬೆಯ ಸೆಂಟ್ ಕ್ಷೇವಿಯರ್ ಕಾಲೇಜಿನಲ್ಲಿ ಫೋಟೋಗ್ರಫಿ ಡಿಪ್ಲೊಮಾ ಮಾಡಿ 1956ರಲ್ಲಿ ಮೈಸೂರಿಗೆ ಹಿಂದಿರುಗಿದರು. ಹವ್ಯಾಸಿ ಛಾಯಾಗ್ರಾಹಕರಾಗಿ ಮೈಸೂರಿನ ಹಲವಾರು ಘಟನಾವಳಿಗಳ ಅಪರೂಪದ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದರು. ಸುಧರ್ಮ, ಡೆಕ್ಕನ್ ಹೆರಾಲ್ಡ್ ಮುಂತಾದ ಪತ್ರಿಕೆಗಳಲ್ಲಿ  ಅವರು ಸೇವೆ ಸಲ್ಲಿಸಿದ್ದಾರೆ.

Senior-press-photographer-Amar Das D.H-Died

ಮೃತರು ಪತ್ನಿ ಆಶಾ ದಾಸ್, ಮಕ್ಕಳಾದ ಪ್ರೀತಿ, ಜ್ಯೋತಿ, ನಿತಿನ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ನಗರದ ವಿಜಯನಗರದಲ್ಲಿರುವ ಚಿತಾಗಾರದಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

key words : Senior-press-photographer-Amar Das D.H-Died