ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ  ಅವರಿಗೆ ಪರಿವರ್ತನಂ ಟ್ರಸ್ಟ್ ವತಿಯಿಂದ ಶ್ರದ್ಧಾಂಜಲಿ…

ಮೈಸೂರು,ಮೇ,2,2019(www.justkannada.in): ಇಂದು ನಿಧನರಾದ ಕರ್ನಾಟಕ ರಂಗಭೂಮಿಯ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರಿಗೆ  ಮೈಸೂರಿನಲ್ಲಿ ಪರಿವರ್ತನಂ ಟ್ರಸ್ಟ್ ವತಿಯಿಂದ ಸಂತಾಪ  ಸೂಚಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು,

ನಗರದ ಚಾಮುಂಡಿಪುರಂ ವೃತ್ತದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ  ಹಿರಿಯ ಕಲಾವಿದ ಪ್ರಚಾರಕ ಮೈಕ್ ಚಂದ್ರು  ಅವರು ಹಿರಯ ನಟ ಹಿರಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು, ನಂತರ ಪದಾಧಿಕಾರಿಗಳು ಮೌನಚರಣೆ ಸಂತಾಪ ಸಲ್ಲಿಸಿದರು, ಇದೇ ವೇಳೆ ಹಿರಿಯ ರಂಗಕರ್ಮಿ ಮೈಕ್ ಚಂದ್ರು ರವರು ಮಾತನಾಡಿ, ಐತಿಹಾಸಿಕ ಪೌರಾಣಿಕ ನಾಟಕಗಳು ನಡೆಯುತ್ತಿದ್ದ ದಿನಗಳಲ್ಲಿ ಪ್ರಜಾಪ್ರಭುತ್ವ ಬಂದ ನಂತರ ರಾಜಕೀಯ ವಿಡಂಬಣೆ ಟೀಕೆಗಳ ಮೂಲಕ ಸಾಮಾಜಿಕ ನಾಟಕ ಪ್ರದರ್ಶಿಸಿ ಇಡೀ ದೇಶದ ಗಮನ ಸೆಳೆದ ವ್ಯಕ್ತಿಯೇ ನಾಟಕರತ್ನ ಮಾಸ್ಟರ್ ಹಿರಣ್ಣಯ್ಯ ರವರು,  ಹಿರಣ್ಣಯ್ಯರವರು ಮೂಲತಃ ಮೈಸೂರಿನವರು ಅವರು ಡಿ. ಬನುಮಯ್ಯ ಕಾಲೇಜು ಮತ್ತು ಶಾರದವಿಲಾಸ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು, ಕೆ ಹಿರಣ್ಣಯ್ಯ ಮಿತ್ರಮಂಡಳಿ ವತಿಯಿಂದ ನಡೆಯುತ್ತಿದ್ದ ನಾಟಕ ಪ್ರದರ್ಶನದ ಪೂರದವ ಮಾಹಿತಿಯ ಪ್ರಚಾರಕನಾಗಿ 20ವರ್ಷಗಳು ನಾನು ಕೆಲಸ ಮಾಡಿದ್ದೇನೆ ಎಂದು ಮೈಕ್ ಚಂದ್ರು ಸ್ಮರಿಸಿದರು, ನಂತರ ಅವರು ಮಾತನಾಡಿ ತಮ್ಮ ಪರಿಣಾಮಕಾರಿ ಭಾಷಣ ಶೈಲಿಯಿಂದ ಜನಮನವನ್ನು ಗೆದ್ದು ರಾಜಕೀಯ ಮತ್ತು ಭ್ರಷ್ಟಾಚಾರಗಳನ್ನು ಟೀಕಿಸಿ ಸಮಾಜಿಕ ನ್ಯಾಯದ ಕಡೆ ಜನಸಾಮಾನ್ಯರನ್ನು ಜಾಗೃತರನ್ನಾಗಿ ಮಾಡುತ್ತಿದ್ದರು ಎಂದರು.

ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಲಂಚಾವತಾರ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಡಬ್ಬಲ್ ತಾಳಿ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ ಅವರ ಪ್ರಮುಖ ನಾಟಕ ಪ್ರದರ್ಶನಗಳು ಕಣಗಾಲ್ ಪ್ರಭಾಕರ್ ಶಾಸ್ತ್ರಿ ರವರು ಸಾಹಿತ್ಯ ಬರೆಯುತ್ತಿದ್ದರು, ನಾಟಕ ಪ್ರದರ್ಶಿಸುತ್ತಿದ್ದ ಸಂಧರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಗುಂಡೂರಾಯರು ಮತ್ತು ದೇವರಾಜ ಅರಸರು ನಾಟಕ ವೀಕ್ಷಿಸಲು ಬರುತ್ತಿದ್ದರು, ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರು ಕಂಠೀರವ ರತ್ನ ಎಂದು ಹಿರಣ್ಣಯ್ಯರವರಿಗೆ ಬಿರುದು ಕೊಟ್ಟು ಸನ್ಮಾನಿಸಿದ್ದರು ಎಂದು ಮಾತನಾಡಿದರು,

ನಂತರ ಅಜಯ್ ಶಾಸ್ತ್ರಿ,  ಮಾತನಾಡಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನವರಾದ ಹಿರಣ್ಣಯ್ಯ ಅವರ ರಂಗಭೂಮಿ ಸೇವೆ ಅಪಾರ, ನೂರಾರು ಸಹಾಯಾರ್ಥ ಪ್ರದರ್ಶನವನ್ನು ನೀಡಿದ್ದಾರೆ ಸುಂದರ್ ಕೃಷ್ಣ ಅರಸ್ ಡಿಂಗ್ರಿ ನಾಗರಾಜ್ ಅಂತಹ ನೂರಾರು ಕಲಾವಿದರನ್ನು ಬೆಳೆಸಿದ್ದಾರೆ, ಅಧಿಕಾರಿಗಳು ಜನಪ್ರತಿನಿಧಿಗಳ ತಪ್ಪನ್ನು ನಾಟಕದ ಮೂಲಕ ತಿದ್ದುತ್ತಿದ್ದರು,

ಮುಂದಿನ ದಿನದಲ್ಲಿ ಮಾಸ್ಟರ್ ಹಿರಣ್ಣಯ್ಯ ರವರ ಸೇವೆಯನ್ನು ಯುವಪೀಳಿಗೆಗೆ  ಶಾಶ್ವತವಾಗಿ ತಿಳಿಸಲು ಯಾವುದಾದರೂ ವೃತ್ತಕ್ಕೆ ನಾಮಕರಿಸಬೇಕು ಮತ್ತು  ಕರ್ನಾಟಕ ನಾಟಕ ಪರಿಷತ್ ವತಿಯಿಂದ  ಯೋಜನೆಗಳನ್ನು ರೂಪಿಸಿ  ಯುವರಂಗಕರ್ಮಿಗಳನ್ನು ಮುಖ್ಯವಾಹಿನಿಗೆ ತರಬೇಕು ಎಂದರು.

ಪರಿವರ್ತನಂ‌ ಟ್ರಸ್ಟ್ ಆಯೋಜಿಸಿದ್ದ ನಾಟಕರತ್ನ ನಮನ ಸಂತಾಪ ಸಭೆಯಲ್ಲಿ ಹಿರಿಯ ಕಲಾವಿದ ಮೈಕ್ ಚಂದ್ರು, ಸಮಾಜಸೇವಕ ವಿಕ್ರಂ ಅಯ್ಯಂಗಾರ್, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ಜೆಡಿಎಸ್ ಮುಖಂಡ ಅಜಯ್ ಶಾಸ್ತ್ರಿ, ಬಾಲಕೃಷ್ಣ,  ಜಯಸಿಂಹ, ಗ್ರಾಮ ಪಂಚಾಯತಿ ಸದಸ್ಯ ವಿಜಯ್ ಕುಮಾರ್, ಕಡಕೊಳ ಜಗದೀಶ್, ಚಕ್ರಪಾಣಿ,ರಂಗನಾಥ್ ಕಶ್ಯಪ್ ,ಅಪೂರ್ವ ಸುರೇಶ್, ಮೈಲಾ ವಿಜಯ್ ಕುಮಾರ್ , ಸುಚೀಂದ್ರ, ಗುರು, ಮಂಜುನಾಥ್, ಚಂದ್ರು, ದಿನೇಶ್ ಮುಂತಾದವರು ಇದ್ದರು.

Key words: Senior actor- Master Hiranyaiah- Condolences – Parivartanam Trust- mysore