ಆಡಿಸುತ್ತಾ, ಪ್ರಯೋಗಗಳನ್ನು ಮಾಡಿಸುತ್ತಾ ಕಲಿಸುವ ‘ಸೀಮ್ಯಾಕ್ ಲರ್ನಿಂಗ್ ಸೆಂಟರ್’ ಮೈಸೂರಲ್ಲಿ ಆರಂಭ

ಮೈಸೂರು, ಜುಲೈ 30, 2022 (www.justkannada.in): ಅದೇ ಹಳೆಯ ಪಠ್ಯ ಚಟುವಟಿಕೆಗಳು ಮಕ್ಕಳಿಗೆ ಕಲಿಕೆಯಲ್ಲಿ ನಿರಾಸಕ್ತಿ ಹುಟ್ಟಿಸಬಹುದು. ಆದರೆ ಆಡುತ್ತಾ, ನಲಿಯುತ್ತಾ, ಹೊಸ ಪ್ರಯೋಗಗಳಿಗೆ ತಮ್ಮ ಒಡ್ಡಿಕೊಳ್ಳುತ್ತಾ ಕಲಿಯುವ ಕಲಿಕೆ ಅಚ್ಚಳಿಯದೇ ಉಳಿಯುತ್ತದೆ.  ಇಂತಹ ವಿಭಿನ್ನ ಕಲಿಕಾ ವಿಧಾನ ಮೈಸೂರಿನಲ್ಲಿಯೂ ಆರಂಭವಾಗಿದೆ.

ಕೇವಲ ಪಠ್ಯಕ್ಕೆ ಸೀಮಿತವಾಗದೇ ಹೊಸ ಹೊಸ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಸುವ ಸಿಮ್ಯಾಕ್ ಲರ್ನಿಂಗ್ (SEMAC) ಸೆಂಟರ್ ಮೈಸೂರಿನಲ್ಲಿ ಆರಂಭಿಸಲಾಗಿದೆ.

ಸಾಂಪ್ರದಾಯಿಕ ಕಲಿಕಾ ವಿಧಾನ ಬಿಟ್ಟು ವಿಜ್ಞಾನ, ಎಲೆಕ್ಟ್ರಾನಿಕ್ಸ್, ಗಣಿತ, ಕಲೆ ಮತ್ತು ಕರಕುಶಲ ಕಲೆ) ಹಲವಾರು  ಹೊಸ ಚಟುವಟಿಕೆಗಳೊಂದಿಗೆ ಕಲಿಸುವ ವಿಧಾನವೇ ಸೀಮ್ಯಾಕ್ (SEMAC). ನವೀನ ಚಟುವಟಿಕೆಗಳನ್ನು ಒಳಗೊಂಡು ಆ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವ ಈ ಸಿಮ್ಯಾಕ್ ವಿಧಾನ ಶಿಕ್ಷಣದಲ್ಲಿ ಸಾಕಷ್ಟು ಅನುಭವ ಹೊಂದಿರುವ ಮಾರ್ಗದರ್ಶಕರು ಮಕ್ಕಳಿಗೆ ನೈಜ ಮತ್ತು ವೈಜ್ಞಾನಿಕವಾಗಿ ಶಿಕ್ಷಣ ನೀಡುವಂತಹ ಚಟುವಟಿಕೆಗಳನ್ನು ಇಲ್ಲಿ ವಿನ್ಯಾಸಗೊಳಿಸಲಾಗಿದೆ.

ಎಲ್ಲಿದೆ ಸೀಮ್ಯಾಕ್ ಕೇಂದ್ರ?: 1157, ಮೊದಲ ಮಹಡಿ, ಬಜ್ಜಣ್ಣ ಲೇನ್, ಚಾಮರಾಜಪುರಂನಲ್ಲಿ ಸೀಮ್ಯಾಕ್ ಲರ್ನಿಂಗ್ ಸೆಂಟರ್ ಆರಂಭವಾಗಿದೆ.  ಹಲವಾರು ನುರಿತ ಅನುಭವಿಗಳು, ತರಬೇತಿ ಪಡೆದ ವೃತ್ತಿಪರರು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ.

ಹಲವು ಬ್ಯಾಚ್ ಗಳಲ್ಲಿ ತರಗತಿಗಳು ನಡೆಯುತ್ತವೆ. ವಾರದ ದಿನಗಳಲ್ಲಿ ಸಂಜೆ ನಾಲ್ಕರಿಂದ ಐದು, ಐದರಿಂದ ಆರು ಹಾಗೂ ಆರರಿಂದ ಏಳು ಗಂಟೆವರೆಗೆ ತರಗತಿ ನಡೆಯಲಿವೆ. ಜತೆಗೆ ವಾರಾಂತ್ಯದಲ್ಲಿ ಭಾನುವಾರ 10ರಿಂದ 1 ಗಂಟೆವರೆಗೆ ಹಲವು ಬ್ಯಾಚ್ ಗಳಲ್ಲಿ ತರಬೇತಿ ನೀಡಲಾಗುತ್ತದೆ. ಕೆ1 ರಿಂದ 4, ಕೆ6ರಿಂದ 7 ಹಾಗೂ ಕೆ8 ರಿಂದ 10ರವರೆಗೆ ಬೇರೆ ಬೇರೆ ವಿಭಾಗಳ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ.

ಹಲವಾರು ವಿಷಯಗಳ ತರಬೇತಿ: ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ, ಕಲೆ ಮತ್ತು ಕರಕುಶಲ, ಮಣ್ಣಿನ ವಿಜ್ಞಾನ, ಆರೋಗ್ಯ ಮತ್ತು ಕ್ಷೇಮ, ಜೀವನ ಕೌಶಲ್ಯಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ನುರಿತ ಅನುಭವಿ ವೃತ್ತಿಪರರೇ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ.

ಮಕ್ಕಳಿಗೆ ಹಳೇ ಸಾಂಪ್ರದಾಯಿಕ ವಿಧಾನದ ಶಿಕ್ಷಣ ಬೋರ್ ಹೊಡಿಸಬಹುದು. ಹೀಗಾಗಿ ಕಲಿಕೆಯಲ್ಲಿ ಆಸಕ್ತಿ ಬೆಳೆಸುವ ಪ್ರಯೋಗಗಳ ಮೂಲಕ ಕಲಿಸುವ ಮೂಲಕ ಅವರಲ್ಲಿ ಕೌಶಲ್ಯವನ್ನು ಬೆಳೆಸಬಹುದು. ಇಂತಹ ವಿಧಾನವನ್ನು ಮೈಸೂರಿನಲ್ಲಿ ಆರಂಭಿಸಬೇಕೆಂದು ಸೀಮ್ಯಾಕ್ ಲರ್ನಿಂಗ್ ಸೆಂಟರ್ ಅನ್ನು ಮೈಸೂರಿನಲ್ಲಿ ಆರಂಭಿಸಲಾಗಿದೆ. ಈ ವಿಷಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರರಾದ ಜೋ ಕ್ರೂಜ್ಮನ್ ಅವರು ಇತ್ತೀಚಿಗೆ ಸೆಂಟರ್ ಅನ್ನು ಉದ್ಘಾಟಿಸಿದ್ದಾರೆ. ಜತೆಗೆ ಇವರು ಕೂಡ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ ಎಂದು ಸೀಮ್ಯಾಕ್ ಲರ್ನಿಗ್ ಸೆಂಟರ್ ಸಂಸ್ಥಾಪಕ ಎಂ.ಪಿ.ಪ್ರಶಾಂತ್ ಮಾಹಿತಿ ನೀಡಿದ್ದಾರೆ.

ಆಸಕ್ತ ಪೋಷಕರು 7899001111, 8073231322 ಅಥವಾ www.semaclearning.com ವೆಬ್ ಸೈಟ್ ಗೆ ಭೇಟಿ ನೀಡಬಹುದು.