ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಿದ್ರೆ ಕಠಿಣ ಕ್ರಮ- ಕೇಂದ್ರ ಸಚಿವ ಭಗವಂತ ಖೂಬಾ ಎಚ್ಚರಿಕೆ.

kannada t-shirts

ಕಲಬುರಗಿ,ಆಗಸ್ಟ್,18,2021(www.justkannada.in):  ರೈತರಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಿದರೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ  ಮಾಧ್ಯಮಗಳ ಜತೆ ಮಾತನಾಡಿದ ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ ಖೂಬಾ, 2022 ರಲ್ಲಿ ಭಾರತ ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಲಿದೆ. ಡೀಲರ್ ಗಳು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಿದ್ರೆ ಕಠಿಣ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಂಸತ್ ನಲ್ಲಿ ಸಚಿವರ ಪರಿಚಯ ಮಾಡಿಸಲು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಬಿಡಲಿಲ್ಲ. ವೋಟ್ ಬ್ಯಾಂಕ್ ಕೈತಪ್ಪುವ ಭೀತಿಯಲ್ಲಿ ವಿಪಕ್ಷಗಳು ಸಚಿವರ ಪರಿಚಯಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ನಾವು ಜನಾಶೀರ್ವಾದ ಮಾಡುತ್ತಿದ್ದೇವೆ ಎಂದು  ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.

Key words: Selling -fertilizer – price -higher – fixed price – tough action-.Union Minister –bhagavanta Khooba

website developers in mysore