ಭದ್ರತಾ ಕಾರಣ: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ರದ್ದು

Promotion

ಬೆಂಗಳೂರು, ಜೂನ್ 12, 2022 (www.justkannada.in): ಭದ್ರತಾ ಕಾರಣಗಳಿಂದ ವಡೋದರಾ ನಗರದಲ್ಲಿ ನಡೆಯಬೇಕಿದ್ದ ಪ್ರಧಾನಿ ಮೋದಿ ರೋಡ್ ಶೋ ರದ್ದು ಮಾಡಲಾಗಿದೆ.

ಜೂನ್ 18 ರಂದು ಪ್ರಧಾನಿ ನರೇಂದ್ರ ಮೋದಿಯವರು ವಡೋದರಾ ಭೇಟಿ ವೇಳೆ ರೋಡ್ ಶೋನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಪೂರ್ವಭಾವಿಯಾಗಿ, ಭದ್ರತಾ ಕಾರಣಗಳಿಂದ ರದ್ದು ಪಡಿಸಲಾಗಿದೆ.

ಈ ಸಂಬಂಧ ಗುಜರಾತ್ ಬಿಜೆಪಿ ಘಟಕದ ಅಧ್ಯಕ್ಷ ಸಿಪಿ ಪಾಟೀಲ್ ಟ್ವೀಟ್​ನಲ್ಲಿ ಮಾಹಿತಿ ನೀಡಿದ್ದಾರೆ.

ಜೂನ್ 18 ರಂದು ಮಧ್ಯಾಹ್ನ 12 ಗಂಟೆಗೆ ವಡೋದರಾದಲ್ಲಿ ನಡೆಯಲಿರುವ ರೋಡ್‌ಶೋ ಅನ್ನು ರದ್ದುಗೊಳಿಸಲು ಸೂಚನೆ ನೀಡಿದ್ದಾರೆ ಎಂದು ಸಿ.ಪಿ. ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಇನ್ನು ಜೂನ್ 18 ರಂದು ಪ್ರಧಾನಿ ಮೋದಿಯವರ ಎರಡನೇ ಭೇಟಿಗೆ ಸಿದ್ಧತೆಗಳು ಭರದಿಂದ ಸಾಗಿವೆ.