ನಾಳೆಯಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ…

ಬೆಂಗಳೂರು,ಸೆಪ್ಟಂಬರ್,6,2020(www.justkannada.in): ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ  ಪರೀಕ್ಷೆ ಆರಂಭವಾಗಲಿದ್ದು  ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.jk-logo-justkannada-logo

ಸೆಪ್ಟೆಂಬರ್ 7 ರಿಂದ 19 ವರೆಗೆ  ಪೂರಕ ಪರೀಕ್ಷೆಗಳು ನಡೆಯಲಿದ್ದು, ಕೆಎಸ್ ಆರ್ ಟಿಸಿ ವತಿಯಿಂದ ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾಕೇಂದ್ರಕ್ಕೆ ತೆರಳಲು ಹಾಗೂ ಹಿಂದಿರುಗುವಾಗ ಸರ್ಕಾರಿ ಬಸ್ ಗಳಲ್ಲಿ ಪ್ರವೇಶ ಪತ್ರ ತೊರಿಸಿ ವಿದ್ಯಾರ್ಥಿಗಳು ಪ್ರಯಾಣಿಸಬಹುದಾಗಿದೆ.second-puc-supplementary-exam-tomorrow-start

ನಗರ ಪ್ರದೇಶ, ಹೊರವಲಯ, ವೇಗಧೂತ ಬಸ್ ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಈ ಉಚಿತ ಬಸ್ ಸೇವೆ ನೀಡಲಾಗಿದೆ.

Key words: second puc -supplementary- exam-tomorrow– start