”ಶಾಲೆ-ಕಾಲೇಜುಗಳು ಪ್ರಾರಂಭ, ರಾಜ್ಯದೆಲ್ಲೆಡೆ ಉತ್ತಮ ಬೆಂಬಲ” : ಸಚಿವ ಎಸ್.ಸುರೇಶ್ ಕುಮಾರ್

ಬೆಂಗಳೂರು,ಜನವರಿ,03,2021(www.justkannada.in)  : ರಾಜ್ಯದ ಎಲ್ಲ ಕಡೆ ಶಾಲೆ-ಕಾಲೇಜುಗಳು ಪ್ರಾರಂಭವಾಗಿರುವ ಬಗ್ಗೆ ಉತ್ತಮ ಬೆಂಬಲ ಹಾಗೂ ಸಂತಸ ವ್ಯಕ್ತವಾಗುತ್ತಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.jk-logo-justkannada-mysoreಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿವ ಸುರೇಶ್ ಕುಮಾರ್ ಅವರು, ನನ್ನದೊಂದು ಕಳಕಳಿಯ ಮನವಿ. ಕಳೆದ ನಾಲ್ಕು ದಿನಗಳಿಂದ ನಾನು ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದೇನೆ. ನಿನ್ನೆ ಮತ್ತು ಇಂದು ಆನೇಕಲ್ಲು ಮತ್ತು ರಾಮನಗರ, ಮಾಗಡಿ ತಾಲೂಕುಗಳ ಶಾಲಾ-ಕಾಲೇಜುಗಳಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಮಾತನಾಡಿಸಿದ್ದೇನೆ. ಎಲ್ಲ ಕಡೆ ಶಾಲೆ-ಕಾಲೇಜುಗಳು ಪ್ರಾರಂಭವಾಗಿರುವ ಬಗ್ಗೆ ಉತ್ತಮ ಬೆಂಬಲ ಹಾಗೂ ಸಂತಸ ಕಂಡುಬರುತ್ತಿದೆ. ಮಕ್ಕಳ ಖುಷಿ, ಸಂಭ್ರಮ..ನೋಡಿಯೇ ಅನುಭವಿಸಬೇಕು ಎಂದು ಸಂತೋಷ ಹಂಚಿಕೊಂಡಿದ್ದಾರೆ.

ಇದರ ಜೊತೆಜೊತೆಗೆ ಮತ್ತೆ ಆತಂಕ ಉಂಟುಮಾಡುವ ಸುದ್ದಿಗಳೂ ಪ್ರಕಟವಾಗುತ್ತಿವೆ. ನಿನ್ನೆಯಿಂದ ತಾನೇ ನಮ್ಮ ಎಸ್.ಎಸ್.ಎಲ್.ಸಿ ಮತ್ತು ಎರಡನೇ ಪಿಯುಸಿ ತರಗತಿಗಳು ಹಾಗೂ ವಿದ್ಯಾಗಮ ಕಾರ್ಯಕ್ರಮಗಳು ಪ್ರಾರಂಭವಾಗಿರುವುದು. ಆಗಲೇ ಇಂದು ಶಾಲೆಗಳಲ್ಲಿ ಕೊರೋನಾ ಹರಡುತ್ತಿದೆ ಎಂದು ಅರ್ಥ ಬರುವಂತಹ ಸುದ್ದಿಗಳನ್ನು ಗಮನಿಸಿದೆ. ಇದು ವಿದ್ಯಾಗಮವಲ್ಲ, ಬದಲಿಗೆ ಇದು ‘ಕೊರೋನಾಗಮ’ ಎಂಬ ವರ್ಣರಂಜಿತ ನಾಮಕರಣ ಕೇಳಿ ಮನಸ್ಸಿಗೆ ವೇದನೆಯಾಯಿತು ಎಂದು ವಿಷಾದವ್ಯಕ್ತಪಡಿಸಿದ್ದಾರೆ.

ಎಲ್ಲರಲ್ಲೂ, ಶಿಕ್ಷಣಕ್ಕೆ ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ಸುದ್ದಿಯನ್ನು ದಯವಿಟ್ಟು Sensationalize ಮಾಡಬಾರದೆಂದು ನಾನು ಕಳಕಳಿಯಿಂದ ವಿನಂತಿ ಮಾಡುತ್ತಿದ್ದೇನೆ. ಮಕ್ಕಳ ಬಗ್ಗೆ ತುಸು ಉದಾರತೆ ಮತ್ತು ಕಾಳಜಿ…ಅಗತ್ಯ ಎಂದು ನಮಗೆಲ್ಲಾ ತಿಳಿದೇ ಇದೆ. ಇಂದು ಅವರ ಮನಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ನಾವು ಯಾವುದೇ ವೃತ್ತಿಯಲ್ಲಿದ್ದರೂ ನಾವು ಈ ಸಮಾಜದ ಭಾಗ ಎಂಬುದೂ ಮುಖ್ಯ. ಎಲ್ಲ ಕಡೆ ಮಕ್ಕಳು ತರಗತಿಗೆ ಬಂದು ಶಿಕ್ಷಕರಿಂದ ಪಾಠ ಕೇಳಬೇಕೆಂಬ ತುಡಿತ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ‘ಯಾವುದೇ ಕಾರಣಕ್ಕೂ ತರಗತಿ ಗಳನ್ನು ನಿಲ್ಲಿಸಬೇಡಿ’ ಎಂದೂ ಸಹ ಮನವಿ ಮಾಡಿರುವ ಸಂಗತಿಗಳೂ ನಡೆದಿವೆ. ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಇದು ಅತ್ಯಂತ ಅಗತ್ಯವಾಗಿರುವುದು ಕಂಡುಬರುತ್ತಿದೆ ಎಂದು ಹೇಳಿದ್ದಾರೆ.School,colleges,start,Great,support,across,state,Minister,S.Suresh Kumar

ನಾವೆಲ್ಲರೂ ಈ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಕಾಳಜಿ ಇಡೋಣ. ಇವರಿಗೆ ಶಿಕ್ಷಣ ದೊರಕದಿದ್ದರೆ ಇವರ ಬಾಳು ಎತ್ತ ಸಾಗುತ್ತದೋ ನಮಗೆ ತಿಳಿಯದು. ಗ್ರಾಮೀಣ ಭಾಗದಲ್ಲಿ ಬಾಲಕಾರ್ಮಿಕ, ಬಾಲ್ಯ ವಿವಾಹ….ಪ್ರಸಂಗಗಳು ಹೆಚ್ಚಾಗುವುದು ಸಮಾಜಕ್ಕೆ ಒಳಿತಲ್ಲ.ನನ್ನ ಈ ಪ್ರಾಮಾಣಿಕ ಅನಿಸಿಕೆ, ಮನವಿಯನ್ನು ದಯವಿಟ್ಟು ಯಾರೂ ತಪ್ಪಾಗಿ ತಿಳಿಯಬೇಡಿ ಎಂದು ತಿಳಿಸಿದ್ದಾರೆ.

key words : School-colleges-start-Great-support-across-state-
Minister-S.Suresh Kumar