ಜ.1ರಿಂದ ಶಾಲಾ-ಕಾಲೇಜು ಆರಂಭ ನಿಶ್ಚಿತ: ಕೊರೋನಾ ರೂಪಾಂತರ ಬಗ್ಗೆ ಆತಂಕಬೇಡ- ಡಿಸಿಎಂ ಅಶ್ವಥ್ ನಾರಾಯಣ್….

kannada t-shirts

ಬೆಂಗಳೂರು,ಡಿಸೆಂಬರ್,29,2020(www.justkannada.in): ಮಕ್ಕಳ ಭವಿಷ್ಯ ದೃಷ್ಠಿಯಿಂದ ಶಾಲೆ ಆರಂಭ ಅನಿವಾರ್ಯ. ಹೀಗಾಗಿ ಜನವರಿ 1 ರಿಂದ ಶಾಲಾ-ಕಾಲೇಜು ಆರಂಭ ನಿಶ್ಚಿತ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ಜನವರಿ 1 ರಿಂದ ಶಾಲೆಗಳನ್ನ ಆರಂಭಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಜನವರಿ 1 ರಿಂದ ಶಾಲೆ ಆರಂಭವಾಗಲಿದ್ದು ಜೀವ ರಕ್ಷಣೆ ಜತೆ ವಿದ್ಯೆ ಕಲಿಸಬೇಕು. ಇನ್ನು ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ನುಡಿದರು.school-college-start-jan-1-dcm-ashwath-narayan

ರೂಪಾಂತರ ವೈರಸ್ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯ ಇಲ್ಲ. ಇದು ಹೆಚ್ಚು ಪರಿಣಾಕಾರಿ ಅಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

Key words: School-college- start – Jan. 1-DCM -Ashwath Narayan.

website developers in mysore